Publish Date: Wed, 10 Nov 2021 (17:27 IST)
Updated Date: Wed, 10 Nov 2021 (17:30 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿ ಅಭಿನಯಿಸಿ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ನಾಯಕಿಯರ ಸಾಲಿನಲ್ಲಿ ರಾಧಿಕಾ ಪಂಡಿತ್ ಕೂಡಾ ಒಬ್ಬರು.
ಆದರೆ ಪುನೀತ್ ತೀರಿಕೊಂಡಾಗಿನಿಂದ ರಾಧಿಕಾ ಒಂದೇ ಒಂದು ಹೇಳಿಕೆ ಕೊಟ್ಟಿರಲಿಲ್ಲ. ಅವರ ಅಂತಿಮ ದರ್ಶನಕ್ಕೂ ಬರಲಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದರು. ಇದಕ್ಕೆಲ್ಲಾ ರಾಧಿಕಾ ಇಂದು ಉತ್ತರ ಕೊಟ್ಟಿದ್ದಾರೆ.
ನಾನು ಅಂತಿಮ ದರ್ಶನಕ್ಕೆ ಬಂದಿದ್ದೇನೋ ಇಲ್ಲವೋ ಎನ್ನುವುದು ಅವರ ಕುಟುಂಬಕ್ಕೆ, ನಮಗೆ ತಿಳಿದಿದೆ. ಕ್ಯಾಮರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮರಾ ಮುಂದೆ ಬಂದು ಮಾತನಾಡದೇ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಿರಲಿಲ್ಲ. ಅವರ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ.
ಅಪ್ಪು ಸರ್ ಅವರ ಅಗಲುವಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ರಾಧಿಕಾ ಹೇಳಿದ್ದಾರೆ.