Publish Date: Wed, 10 Nov 2021 (10:01 IST)
Updated Date: Wed, 10 Nov 2021 (10:08 IST)
ಬೆಂಗಳೂರು: ತಮ್ಮ ಪುನೀತ್ ರಾಜ್ ಕುಮಾರ್ ಕಳೆದುಕೊಂಡಿರುವ ದುಃಖದಲ್ಲಿರುವ ಶಿವರಾಜ್ ಕುಮಾರ್ ಗೆ ಡಿ ಬಾಸ್ ದರ್ಶನ್ ಸಾಂತ್ವನ ಹೇಳಿದ್ದಾರೆ.
ನಿನ್ನೆ ಅರಮನೆ ಮೈದಾನದಲ್ಲಿ ಅಪ್ಪು ಸ್ಮರಣಾರ್ಥ ಅಭಿಮಾನಿಗಳಿಗೆ ದೊಡ್ಮನೆ ಕಡೆಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ದರ್ಶನ್ ನೇರವಾಗಿ ಶಿವಣ್ಣ ಬಳಿ ತೆರಳಿ ಅವರನ್ನು ತಬ್ಬಿ ಸಂತೈಸಿದ್ದಾರೆ.
ದರ್ಶನ್ ಅಂತಿಮ ಸಂಸ್ಕಾರ ಬಂದಿರಲಿಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದರು. ಆದರೆ ಪುನೀತ್ ನಿಧನದ ಸುದ್ದಿ ತಿಳಿದ ತಕ್ಷಣ ದರ್ಶನ್ ನೇರವಾಗಿ ಆಸ್ಪತ್ರೆಗೆ ಓಡಿ ಬಂದಿದ್ದರು. ಇದೀಗ 12 ನೇ ದಿನದ ಕಾರ್ಯದ ವೇಳೆ ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.