Publish Date: Wed, 10 Nov 2021 (08:29 IST)
Updated Date: Wed, 10 Nov 2021 (08:41 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತೀವ್ರ ಆಘಾತ ತಂದಿದೆ.
ಕಳೆದ ಒಂದು ವಾರದಿಂದ ಚಿತ್ರರಂಗ ಹೆಚ್ಚು ಕಡಿಮೆ ಸ್ತಬ್ಧವಾಗಿದೆ. ಬಹುತೇಕ ಸ್ಟಾರ್ ಗಳ ಸಿನಿಮಾಗಳ ಚಿತ್ರೀಕರಣ ಮುಂದೂಡಿಕೆಯಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಇನ್ನು, ಕೆಲವು ಸಿನಿಮಾಗಳ ಪೋಸ್ಟರ್, ಮುಹೂರ್ತ ದಿನಾಂಕಗಳು ಮುಂದೂಡಿಕೆಯಾಗಿದೆ. ಇನ್ನೀಗ ಪುನೀತ್ ರಾಜ್ ಕುಮಾರ್ 11 ನೇ ದಿನದ ಕಾರ್ಯಗಳು ಮುಗಿದ ಹಿನ್ನಲೆಯಲ್ಲಿ ನಿಧಾನವಾಗಿ ಮತ್ತೆ ಸ್ಯಾಂಡಲ್ ವುಡ್ ಚಟುವಟಿಕೆಯತ್ತ ಮರಳಬಹುದು.