ಬೆಂಗಳೂರು: ಅರಮನೆ ಮೈದಾನದಲ್ಲಿ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಕೂಡಾ ಪಾಲ್ಗೊಂಡಿದ್ದರು.
ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಶ್ವಿನಿ ಊಟ ಬಡಿಸಿ ಬಳಿಕ ತಮ್ಮ ಕಾರಿನಲ್ಲಿ ಮರಳುವಾಗ ಪತಿಯ ನೆನೆದು ಕಣ್ಣೀರು ಹಾಕಿದ ಘಟನೆ ನಡೆದಿದೆ.
ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೆರಿದಂತೆ ಇಡೀ ಕುಟುಂಬ ವರ್ಗವೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಲ್ಲಿ ಪುನೀತ್ ಫೋಟೋ ನೋಡುತ್ತಿದ್ದಂತೇ ಅಶ್ವಿನಿ ಭಾವುಕರಾದರು.