ಶಂಕರ್ ನಾಗ್ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಚಿತ್ರ 'ಮಿಂಚಿನ ಓಟ' ಜನ ಮೆಚ್ಚುಗೆ ಗಳಿಸಿಕೊಂಡಿತ್ತು. ದೂರದರ್ಶನಕ್ಕಾಗಿ ಖ್ಯಾತ ಬರಹಗಾರ ಆರ್.ಕೆ. ನಾರಾಯಣ್ ಅವರು ರಚಿಸಿದ 'ಮಾಲ್ಗುಡಿ ಡೇಸ್'ನ ನಿರ್ದೇಶಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆದರು. ಆಗುಂಬೆ, ತೀರ್ಥಹಳ್ಳಿ ಮುಂತಾದೆಡೆ ಚಿತ್ರೀಕರಣಗೊಂಡ 'ಮಾಲ್ಗುಡಿ ಡೇಸ್' ಮತ್ತು 'ಸ್ವಾಮಿ' ಧಾರಾವಾಹಿ ಸರಣಿಗಳು ಕರ್ನಾಟಕದ ಗರಿಮೆ ಹೆಚ್ಚಿಸಿದ್ದವು.ಬೆಂಗಳೂರು ಮೆಟ್ರೋವನ್ನು ನಿರ್ಮಿಸಲು ಆ ಕಾಲದಲ್ಲೇ ಚಿಂತನೆ ನಡೆಸಿದ್ದರು ನಮ್ಮ ಶಂಕ್ರಣ್ಣ. ಸಣ್ಣ ವಯಸ್ಸಿನಲ್ಲೇ ತೀರಿಕೊಂಡರೂ ಕನ್ನಡ ನಾಡಿಗೆ ಅವರು ನೀಡಿದ ಕೊಡುಗೆ ಇಂದಿಗೂ ಚಿರಸ್ಮರಣೀಯ. ಅವರ ಹುಟ್ಟುಹಬ್ಬವನ್ನು ಕನ್ನಡದ ಹಬ್ಬವೆಂದೇ ಲಕ್ಷಾಂತರ ಅಭಿಮಾನಿಗಳು ಇಂದಿಗೂ ಆಚರಿಸುತ್ತಿದ್ದಾರೆ.