Select Your Language

Notifications

webdunia
webdunia
webdunia
webdunia

ಇಂದು ಶಂಕರ್ ನಾಗ್ ಜನ್ಮದಿನ;ಕಣ್ಮಣಿ ನೆನೆದ ಸೆಲೆಬ್ರಿಟಿಗಳು

ಇಂದು ಶಂಕರ್ ನಾಗ್ ಜನ್ಮದಿನ;ಕಣ್ಮಣಿ ನೆನೆದ ಸೆಲೆಬ್ರಿಟಿಗಳು
ಬೆಂಗಳೂರು , ಮಂಗಳವಾರ, 9 ನವೆಂಬರ್ 2021 (14:04 IST)
ಶಂಕರ್ ನಾಗ್ ಇಂದು ಬದುಕಿದ್ದರೆ 67ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ನಟನೆ, ನಿರ್ದೇಶನ, ನಿರ್ಮಾಣದ ಮೂಲಕ ಜನರ ಮನ ಗೆದ್ದ ಅವರು 36 ನೇವಯಸ್ಸಿನಲ್ಲೇ ನಿಧನ ಹೊಂದಿದ್ದರು.
ಜನ್ಮದಿನದಂದು ಅವರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ‘ಆಟೋ ರಾಜ’ ಸಿನಿಮಾ ಮೂಲಕ ಶಂಕ್ರಣ್ಣ ಅಸಂಖ್ಯಾತ ಆಟೋ ಚಾಲಕರಲ್ಲಿ ಸ್ವಾಭಿಮಾನದ ಭಾವನೆ ಮೂಡಿಸಿದ್ದರು. 1954ರಲ್ಲಿ ಹೊನ್ನಾವರದಲ್ಲಿ ಜನಿಸಿದರು ಶಂಕರ್ ನಾಗ್. ಮರಾಠಿ ನಾಟಕಗಳಿಂದ ಪ್ರಭಾವಿತರಾಗಿ ಕನ್ನಡದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಂಡಿದ್ದರು. ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಮುಂದೆ ಹಲವು ಪ್ರಯೋಗಗಳನ್ನು ಮಾಡಿದರು.
ಶಂಕರ್ ನಾಗ್ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ಮಿಂಚಿನ ಓಟ’  ಜನ ಮೆಚ್ಚುಗೆ ಗಳಿಸಿಕೊಂಡಿತ್ತು. ದೂರದರ್ಶನಕ್ಕಾಗಿ ಖ್ಯಾತ ಬರಹಗಾರ ಆರ್.ಕೆ. ನಾರಾಯಣ್ ಅವರು ರಚಿಸಿದ ‘ಮಾಲ್ಗುಡಿ ಡೇಸ್’ನ ನಿರ್ದೇಶಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆದರು. ಆಗುಂಬೆ, ತೀರ್ಥಹಳ್ಳಿ ಮುಂತಾದೆಡೆ ಚಿತ್ರೀಕರಣಗೊಂಡ ‘ಮಾಲ್ಗುಡಿ ಡೇಸ್’ ಮತ್ತು ‘ಸ್ವಾಮಿ’ ಧಾರಾವಾಹಿ ಸರಣಿಗಳು ಕರ್ನಾಟಕದ ಗರಿಮೆ ಹೆಚ್ಚಿಸಿದ್ದವು.
ಬೆಂಗಳೂರು ಮೆಟ್ರೋವನ್ನು ನಿರ್ಮಿಸಲು ಆ ಕಾಲದಲ್ಲೇ ಚಿಂತನೆ ನಡೆಸಿದ್ದರು ನಮ್ಮ ಶಂಕ್ರಣ್ಣ. ಸಣ್ಣ ವಯಸ್ಸಿನಲ್ಲೇ ತೀರಿಕೊಂಡರೂ ಕನ್ನಡ ನಾಡಿಗೆ ಅವರು ನೀಡಿದ ಕೊಡುಗೆ ಇಂದಿಗೂ ಚಿರಸ್ಮರಣೀಯ. ಅವರ ಹುಟ್ಟುಹಬ್ಬವನ್ನು ಕನ್ನಡದ ಹಬ್ಬವೆಂದೇ ಲಕ್ಷಾಂತರ ಅಭಿಮಾನಿಗಳು ಇಂದಿಗೂ ಆಚರಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅರಮನೆ ಮೈದಾನದಲ್ಲಿ ಶಿವಣ್ಣ ರಕ್ತದಾನ