ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 11 ನೇ ದಿನದ ಕಾರ್ಯದ ಬಳಿಕ ದೊಡ್ಮನೆ ವತಿಯಿಂದ ಇಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಸಾವಿರಾರು ಮಂದಿ ಅಭಿಮಾನಿಗಳು ಬರುವ ನಿರೀಕ್ಷೆಯಿದ್ದು, ಅದಕ್ಕಾಗಿ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ. ಏಕಕಾಲಕ್ಕೆ 5000 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಇನ್ನು, ಸಸ್ಯಾಹಾರ ಮತ್ತು ಮಾಂಸಾಹಾರ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ವಿಭಾಗದಲ್ಲಿ ಆಲೂ ಕಬಾಬ್, ಮಸಾಲ ವಡಾ, ಅನ್ನ, ಅಕ್ಕಿ ಪಾಯಸ, ರಸಂ, ಗೀ ರೈಸ್ ಮುಂತಾದ ಆಹಾರ ಸಿದ್ಧವಾಗುತ್ತಿದೆ. ನಾನ್ ವೆಜ್ ವಿಭಾಗದಲ್ಲಿ ಚಿಕನ್ ಚಾಪ್ಸ್, ಚಿಕನ್ ಕಬಾಬ್, ಮೊಟ್ಟೆ, ಅಕ್ಕಿ ಪೇಣಿ ಪಾಯಸ ಸಿದ್ಧಪಡಿಸಲಾಗುತ್ತಿದೆ. ಮಧ್ಯಾಹ್ನ ಸುಮಾರು 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.