Publish Date: Mon, 08 Nov 2021 (17:30 IST)
Updated Date: Mon, 08 Nov 2021 (17:33 IST)
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‍ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್ ವೃತ್ತದವರೆಗಿನ ವರ್ತುಲ ರಸ್ತೆ ಇಲ್ಲವೇ ಬನಶಂಕರಿ ಬಸ್ ನಿಲ್ದಾಣದಿಂದ ಕೆ.ಅರ್.ಪುರಂನ ಹೊರ ವರ್ತುಲ ರಸ್ತೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಸರು ನಾಮಕರಣ ಮಾಡುವ ಸಾಧ್ಯತೆಗಳಿವೆ.ಬಿಬಿಎಂಪಿ ಆಡಳಿತಾಕಾರಿ ರಾಕೇಶ್‍ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್‍ಗುಪ್ತಾ ಅವ ರನ್ನು ಇಂದು ಭೇಟಿಯಾಗಿ ಮನವಿ ಸಲ್ಲಿಸಿದ ಬೆಂಗಳೂರು ಬಿಜೆಪಿ ದಕ್ಷಿಣ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರಿಗೆ ಮುಖ್ಯ ಆಯುಕ್ತರು ಈ ಭರವಸೆ ನೀಡಿದ್ದಾರೆ. ಈ ಹಿಂದೆ ವೆಸ್ಟ್ ಆಫ್ ಕಾರ್ಡ್ ರೋಡಿಗೆ ಪುನೀತ್‍ರಾಜ್‍ಕುಮಾರ್ ಅವರ ಹೆಸರಿಡುವಂತೆ ಅಭಿಮಾನಿಗಳು ಆಗ್ರಹಿಸಿದ್ದರು.
ಆದರೆ, ಪಶ್ಚಿಮ ಕಾರ್ಡ್ ರಸ್ತೆಗೆ ಈ ಹಿಂದೆ ದ.ರಾ.ಬೇಂದ್ರೆ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದರಿಂದ ಮತ್ತೆ ಆ ರಸ್ತೆಗೆ ಪುನೀತ್ ಅವರ ಹೆಸರಿಡಲು ಸಾಧ್ಯವಾಗುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದರು.