Publish Date: Mon, 08 Nov 2021 (09:51 IST)
Updated Date: Mon, 08 Nov 2021 (10:07 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ರಿ ಕಿರಿಯ ಪುತ್ರಿ ಅಪ್ಪನ ಅಗಲುವಿಕೆಯ ನೋವಿನಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾಳೆ.
ಪುನೀತ್ ಪುತ್ರಿ ವಂದಿತಾ ಇದೀಗ 10 ನೇ ತರಗತಿ ವಿದ್ಯಾರ್ಥಿನಿ. ಇಂದಿನಿಂದ ಆಕೆಗೆ ಪೂರ್ವತಯರಿ ಪರೀಕ್ಷೆಯಿದೆ. ಅಪ್ಪನ ಅಗಲುವಿಕೆ ನೋವಿನಲ್ಲೂ ವಂದಿತಾ ಪರೀಕ್ಷೆ ಬರೆಯಲು ತೀರ್ಮಾನಿಸಿದ್ದಾಳೆ.
ಪುನೀತ್ ಮೊದಲ ಪುತ್ರಿ ಧೃತಿ ವಿದೇಶದಲ್ಲಿ ಸ್ಕಾಲರ್ ಶಿಪ್ ಪಡೆದು ಓದುತ್ತಿದ್ದರೆ, ದ್ವಿತೀಯ ಪುತ್ರಿಯೂ ಐಸಿಎಸ್ ಇ ಸಿಲಬಸ್ ನಲ್ಲಿ ಓದುತ್ತಿದ್ದಾಳೆ. ವಂದಿತಾ ಪರೀಕ್ಷೆ ಬರೆಯಲು ಅನುವಾಗುವಂತೆ ಬೇಗನೇ ಪೂಜಾ ಕಾರ್ಯಗಳನ್ನು ಮುಗಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.