Select Your Language

Notifications

webdunia
webdunia
webdunia
webdunia

ಭಾನುವಾರ ಪುನೀತ್ ಸಮಾಧಿ ಬಳಿ ಜನಜಾತ್ರೆ ...!!!

Puneet rajkumar
ಬೆಂಗಳೂರು , ಭಾನುವಾರ, 7 ನವೆಂಬರ್ 2021 (15:47 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 10 ದಿನ ಕಳೆದರೂ, ಅಭಿಮಾನಿಗಳ ಅಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಗೌರವ ನಮನ ಸಲ್ಲಿಸುತ್ತಿದ್ದಾರೆ.ಮಹಿಳೆಯರು, ಯುವಕ, ಯುವತಿಯರು, ವಿಶೇಷ ಚೇತನರು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಅಪ್ಪುವಿನ ಸಮಾಧಿ ಬಳಿಗೆ ಭೇಟಿ ನೀಡುತ್ತಿದ್ದು, ತಮ್ಮ ನೆಚ್ಚಿನ ನಾಯಕ ನಟನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಇಂದು ಗರ್ಭಿಣಿ ಮಹಿಳೆಯೊಬ್ಬರು ತನ್ನ ಒಂದು ತಿಂಗಳ ಮಗುವಿನೊಂದಿಗೆ ಅಪ್ಪು ಸಮಾಧಿ ಭೇಟಿ ಮಾಡಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮೇಕಪ್ ಇಲ್ಲದ ಹೆಂಡತಿ ನೋಡಿ ಡೈವೋರ್ಸ್‍ನೀಡಿದ ಗಂಡ!