ಬೆಂಗಳೂರು: ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನಿಗಳಿಂದ ಅಭಿಮಾನಿ ಬಳಗ ಅವರ ಹೆಸರಿನಲ್ಲಿ ಪುತ್ಥಳಿ ನಿರ್ಮಿಸಲು ಮುಂದಾಗುತ್ತಿವೆ. ಆದರೆ ಇದಕ್ಕೆ ಬಿಬಿಎಂಪಿ ಎಚ್ಚರಿಕೆ ಕೊಟ್ಟಿದೆ.
ಕೋರ್ಟ್ ಆದೇಶದ ಪ್ರಕಾರ ನಗರದಲ್ಲಿ ಈಗಾಗಲೇ ಡಾ.ರಾಜ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಹಲವು ಗಣ್ಯರ ಅನಧಿಕೃತ ಪುತ್ಥಳಿಗಳನ್ನು ಅನಾವರಣಗೊಳಿಸಲು ಬಿಬಿಎಂಪಿ ಮುಂದಾಗಿದೆ. ಇದು ಅಭಿಮಾನಿಗಳಿಗೆ ನೋವು ತರುತ್ತದೆ.
ಹೀಗಾಗಿ ಪುತ್ಥಳಿ ನಿರ್ಮಾಣಕ್ಕೂ ಮೊದಲೇ ಬಿಬಿಎಂಪಿ ಮನವಿ ಮಾಡಿದೆ. ಅನುಮತಿ ಇಲ್ಲದೇ ಪುತ್ಥಳಿ ಮಾಡಿ ಬಳಿಕ ಅದನ್ನು ತೆರುವಗೊಳಿಸುವ ಸಂದರ್ಭ ಎದುರಾದಾಗ ತಾರೆಯರಿಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ ಅನುಮತಿ ಪಡೆದೇ ಪುತ್ಥಳಿ ನಿರ್ಮಾಣ ಮಾಡಿ ಎಂದು ಮನವಿ ಮಾಡಿದೆ.