Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಬಿಗ್ ಅನೌನ್ಸ್ ಮೆಂಟ್ ಗೆ ಇಂದಿನ ಜೀ ಕುಟುಂಬ ಅವಾರ್ಡ್ ನೋಡಿ!

ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಬಿಗ್ ಅನೌನ್ಸ್ ಮೆಂಟ್ ಗೆ ಇಂದಿನ ಜೀ ಕುಟುಂಬ ಅವಾರ್ಡ್ ನೋಡಿ!
ಬೆಂಗಳೂರು , ಶನಿವಾರ, 6 ನವೆಂಬರ್ 2021 (17:05 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಈ ಸಿನಿಮಾದ ಬಗ್ಗೆ ಅಪ್ ಡೇಟ್ ಒಂದನ್ನು ಸುದೀಪ್ ಇಂದು ರಾತ್ರಿ ಪ್ರಸಾರವಾಗಲಿರುವ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ನೀಡಲಿದ್ದಾರೆ.

ಇದು ವಿಕ್ರಾಂತ್ ರೋಣ ಸಿನಿಮಾ ಸ್ಯಾಟ್ ಲೈಟ್ ಹಕ್ಕಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣದ ಸ್ಯಾಟ್ ಲೈಟ್ ಹಕ್ಕು ಜೀ ವಾಹಿನಿ ಪಾಲಾಗಿದೆ ಎನ್ನಲಾಗಿದೆ. ಇದೇ ವಿಚಾರ ಇಂದು ಪ್ರಸಾರವಾಗಲಿರುವ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ.

ಇನ್ನು, ಜೀ ವಾಹಿನಿ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟ್ ಲೈಟ್ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡಿತ್ತು. ಇದೀಗ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವನ್ನೂ ತಮ್ಮ ತೆಕ್ಕೆಗೆ ಪಡೆದುಕೊಂಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ರಾಕಿ ಭಾಯ್ ಯಶ್ ನಂಬರ್ ಪ್ಲೇಟ್!