ಬೆಂಗಳೂರು: ನವಂಬರ್ 16 ರಂದು ವಾಣಿಜ್ಯ ಮಂಡಳಿ ಹಮ್ಮಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಮನ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಖ್ಯಾತ ಕಲಾವಿದರು ಆಗಮಿಸಲಿದ್ದಾರೆ.
ವಾಣಿಜ್ಯ ಮಂಡಳಿ ಈ ಬಗ್ಗೆ ಇಂದು ಸಭೆ ಸೇರಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಕೂಡಾ ಆಗಮಿಸಲಿದ್ದಾರೆ. ಇವರಲ್ಲದೆ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರಿಗೆ ಆಹ್ವಾನ ನೀಡಲಾಗುತ್ತಿದೆ.
ಆ ಪೈಕಿ ಕಮಲ್ ಹಾಸನ್, ಧನುಷ್, ಅಲ್ಲು ಅರ್ಜುನ್, ಸೂರ್ಯ ಮುಂತಾದ ತೆಲುಗು, ತಮಿಳು ಚಿತ್ರರಂಗದ ಘಟಾನುಘಟಿ ಸ್ಟಾರ್ ಗಳು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ.