ಬೆಂಗಳೂರು: ನಮ್ಮನ್ನು ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಕಿರುತೆರೆ ಗಾಯನ ನಮನ ಸಲ್ಲಿಸಲು ಮುಂದಾಗಿದೆ.
									
			
			 
 			
 
 			
			                     
							
							
			        							
								
																	ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಎಸ್ ಪಿ ಬಾಲಸುಬ್ರಮಣ್ಯಂ ಸ್ಮರಣಾರ್ಥ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಗೆ ಹಾಡುಗಳ ಮೂಲಕ ಅಶ್ರುತರ್ಪಣ ಸಲ್ಲಿಸಲು ವಾಹಿನಿ ಮುಂದಾಗಿದೆ. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕ ರಾಜೇಶ್ ಕೃಷ್ಣನ್ ಪವರ್ ಸ್ಟಾರ್ ಬಗ್ಗೆ ತಮ್ಮ ಮನದಾಳದ ಮಾತುಗಳನ್ನಾಡಲಿದ್ದಾರೆ. ಈ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ.
									
										
								
																	ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ಶೋನಲ್ಲೂ ಪವರ್ ಸ್ಟಾರ್ ಸ್ಮರಣಾರ್ಥ ಭಾನುವಾರ ವಿಶೇಷ ಎಪಿಸೋಡ್ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಪುನೀತ್ ಹಾಡುಗಳನ್ನು ಹಾಡಲಿದ್ದು, ತೀರ್ಪುಗಾರರಾದ ಹಂಸಲೇಖ, ವಿಜಯ್ ಪ್ರಕಾಶ್, ಜೊತೆಗೆ ಸಾಹಿತಿ ಜಯಂತ್ ಕಾಯ್ಕಿಣಿ ಕೂಡಾ ಭಾಗಿಯಾಗಲಿದ್ದು, ಪುನೀತ್ ಬಗ್ಗೆ ಮಾತನಾಡಲಿದ್ದಾರೆ.