Select Your Language

Notifications

webdunia
webdunia
webdunia
webdunia

ಪುನೀತ್ ನಮನ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್

ಪುನೀತ್ ನಮನ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್
ಬೆಂಗಳೂರು , ಶನಿವಾರ, 6 ನವೆಂಬರ್ 2021 (09:08 IST)
ಬೆಂಗಳೂರು: ನವಂಬರ್ 16 ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ‘ಪುನೀತ್ ನಮನ’ ಕಾರ್ಯಕ್ರಮಕ್ಕೆ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಆಗಮಿಸಲಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾ ರಂಗದ ದಿಗ್ಗಜರಿಗೆ ಆಹ್ವಾನ ನೀಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಭಾಗವಹಿಸುವುದು ಈಗ ಬಹುತೇಕ ಕನ್ ಫರ್ಮ್ ಆಗಿದೆ. ಇವರಲ್ಲದೆ ಇನ್ನಷ್ಟು ಘಟಾನುಘಟಿ ಕಲಾವಿದರು ಆಗಮಿಸುವ ನಿರೀಕ್ಷೆಯಿದೆ. ಕೊರೋನಾ ಕಾರಣದಿಂದ ಗಣ‍್ಯರು, ಅಪ್ಪು ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ಗೆ ನಾಳೆ ಚಿತ್ರಮಂದಿರಗಳಲ್ಲಿ ಗೌರವ ಸಲ್ಲಿಕೆ