Publish Date: Fri, 05 Nov 2021 (16:41 IST)
Updated Date: Fri, 05 Nov 2021 (16:43 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಕೊನೆಯ ಬಾರಿ ಚಿಕಿತ್ಸೆ ನೀಡಿದ್ದ ವೈದ್ಯ ರಮಣ್ ರಾವ್ ಗೆ ಈಗ ಬೆದರಿಕೆ ಎದುರಾಗಿದೆ. ಅವರ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ.
ಪುನೀತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಾಗಿದೆ. ಕೆಲವರು ವೈದ್ಯ ರಮಣ್ ರಾವ್ ನಿಧಾನ ಮಾಡಿದರು ಎಂದೂ ಆಕ್ರೋಶ ಹೊಂದಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಪ್ರತಿಭಟನೆಯ ಬಿಸಿ ತಾಕಿದೆ.
ಹೀಗಾಗಿ ರಮಣ್ ರಾವ್ ಕ್ಲಿನಿಕ್, ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಪುನೀತ್ ಸಾವಿಗೆ ಕಾರಣರಾದರು ಎಂದು ರಮಣ್ ರಾವ್ ವಿರುದ್ಧ ಡಾ. ರಾಜ್ ಕುಮಾರ್ ಸೇನೆ ಪ್ರತಿಭಟನೆ ನಡೆಸಿತ್ತು.