Publish Date: Fri, 05 Nov 2021 (09:40 IST)
Updated Date: Fri, 05 Nov 2021 (09:43 IST)
ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ತಮಿಳು ನಟ ವಿಶಾಲ್ ವಿಶಿಷ್ಟವಾಗಿ ಗೌರವ ನಮನ ಸಲ್ಲಿಸಿದ್ದಾರೆ.
ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನದಲ್ಲಿ ಪಾಲ್ಗೊಂಡ ವಿಶಾಲ್ ಸಸಿಯೊಂದನ್ನು ನೆಟ್ಟು ಅದಕ್ಕೆ ಪುನೀತ್ ಎಂದು ನಾಮಕರಣ ಮಾಡಿ ಅಗಲಿದ ಗೆಳೆಯನಿಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ವಿಶಾಲ್ ಗೆ ನಟ ಆರ್ಯ ಕೂಡಾ ಸಾಥ್ ನೀಡಿದ್ದಾರೆ.
ಇದಕ್ಕೂ ಮೊದಲು ವಿಶಾಲ್ ಪುನೀತ್ ಆರಂಭಿಸಿದ್ದ ಸಾವಿರಾರು ಮಕ್ಕಳ ಉಚಿತ ಶಿಕ್ಷಣ ಜವಾಬ್ಧಾರಿಯನ್ನು ತಾನು ಹೊತ್ತುಕೊಳ್ಳುವುದಾಗಿ ಘೋಷಿಸಿದ್ದರು. ಇದೀಗ ತಾವು ನೆಟ್ಟ ಸಸಿಗೆ ಪುನೀತ್ ಎಂದು ನಾಮಕರಣ ಮಾಡಿ ಗೌರವ ನೀಡಿದ್ದಾರೆ.