Publish Date: Thu, 04 Nov 2021 (17:12 IST)
Updated Date: Thu, 04 Nov 2021 (17:14 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.
ಪುನೀತ್ ಹಿಂದಿನ ದಿನ ಗುರುಕಿರಣ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಆರಾಮವಾಗಿ ಲವ ಲವಿಕೆಯಿಂದಿದ್ದರು. ಸ್ವತಃ ಗುರುಕಿರಣ್ ಅವರು ಫಿಟ್ ಆಂಡ್ ಫೈನ್ ಆಗಿದ್ದರು ಎಂದಿದ್ದರು. ಇಷ್ಟು ಆರಾಮವಾಗಿದ್ದ ಅಪ್ಪು ಸಾವಿನ ಹಿಂದೆ ಬೇರೇನೋ ಮಸಲತ್ತು ಇದ್ದಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿರುವ ಶಿವರಾಜ್ ಕುಮಾರ್, ಅಪ್ಪುವೇ ಹೋದ ಮೇಲೆ ಈಗ ಯಾಕೆ ಇದೆಲ್ಲ? ದಯವಿಟ್ಟು ಬೇಡ. ಈಗ ಅದನ್ನೆಲ್ಲಾ ಮಾತನಾಡಿ ಪ್ರಯೋಜನವಿಲ್ಲ. ಅದೆಲ್ಲವನ್ನು ಬಿಟ್ಟು ಮುಂದೆ ಸಾಗಬೇಕಿದೆ ಎಂದು ಶಿವಣ್ಣ ಹೇಳಿದ್ದಾರೆ.