ಬೆಂಗಳೂರು: ನವಂಬರ್ 17 ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ದಕ್ಷಿಣ ಭಾರತೀಯ ಕಲಾವಿದರಿಂದ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.
ಅಕಾಲಿಕವಾಗಿ ನಿಧನರಾಗಿ ಇಡೀ ಸಿನಿ ರಂಗವನ್ನೇ ಕಂಬನಿಯಲ್ಲಿ ಮುಳುಗಿಸಿದ ಪವರ್ ಸ್ಟಾರ್ ಗೆ ಕರ್ನಾಟಕ ವಾಣಿಜ್ಯ ಮಂಡಳಿ ಈ ಗೌರವ ನೀಡಲಿದೆ.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಹೆಸರಾಂತ ಕಲಾವಿದರು ಆಗಮಿಸಿ ಪುನೀತ್ ಬಗ್ಗೆ ಮಾತನಾಡಲಿದ್ದಾರೆ.