Select Your Language

Notifications

webdunia
webdunia
webdunia
webdunia

ನವಂಬರ್ ನಲ್ಲಿ ರಿಲೀಸ್ ಗೆ ಸಿದ್ಧವಾದ ಸಿನಿಮಾಗಳು

ನವಂಬರ್ ನಲ್ಲಿ ರಿಲೀಸ್ ಗೆ ಸಿದ್ಧವಾದ ಸಿನಿಮಾಗಳು
ಬೆಂಗಳೂರು , ಬುಧವಾರ, 3 ನವೆಂಬರ್ 2021 (10:19 IST)
ಬೆಂಗಳೂರು: ಥಿಯೇಟರ್ ಗಳನ್ನು ಸಂಪೂರ್ಣವಾಗಿ ತೆರೆಯಲು ಅನುಮತಿ ಕೊಟ್ಟ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಪ್ರತೀ ವಾರ ಸಿನಿಮಾಗಳ ಸಾಲೇ ಹೊರಬರುತ್ತಿದೆ.ಇದೀಗ ನವಂಬರ್ ನಲ್ಲಿ ರಿಲೀಸ್ ಆಗಲು ನಿಂತಿರುವ ಸಿನಿಮಾಗಳು ಯಾವುವು ನೋಡೋಣ.

ಟಾಮ್ ಆಂಡ್ ಜೆರ್ರಿ: ಕೆಜಿಎಫ್ 1 ಸಿನಿಮಾದ ಡೈಲಾಗ್ ರೈಟರ್ ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ‘ಟಾಮ್ ಆಂಡ್ ಜೆರ್ರಿ’ ಸಿನಿಮಾ ನವಂಬರ್ 12 ಕ್ಕೆ ರಿಲೀಸ್ ಆಗುತ್ತಿದೆ. ಇದರಲ್ಲಿ ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಕರೋಡಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಹಾಯಾಗಿದೆ ಎನ್ನುವ ಹಾಡು ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

ಪ್ರೇಮಂ ಪೂಜ್ಯಂ: ನೆನೆಪಿರಲಿ ಪ್ರೇಮ್ ನಾಯಕರಾಗಿರುವ ಪ್ರೇಮಂ ಪೂಜ್ಯಂ ಎಂಬ ರೊಮ್ಯಾಂಟಿಕ್ ಎಂಟರ್ ಟೈನರ್ ಸಿನಿಮಾ ನವಂಬರ್ 12 ಕ್ಕೆ ಬಿಡುಗಡೆಯಾಗುತ್ತಿದೆ.

ರಮೇಶ್ ಅರವಿಂದ್ 100: ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ 100 ಸಿನಿಮಾ ನವಂಬರ್ 19 ರಿಂದ ತೆರೆಗೆ ಬರುತ್ತಿದೆ. ಈ ಸಿನಿಮಾ ಸೈಬರ್ ಕ್ರೈಂ ಕುರಿತಾದ ಕತೆ ಹೊಂದಿದ್ದು, ರಚಿತಾ ರಾಮ್, ಪೂರ್ಣ ಪ್ರಮುಖ ಪಾತ್ರದಲ್ಲಿದ್ದಾರೆ.

ಮುಗಿಲ್ ಪೇಟೆ: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕರಾಗಿರುವ ಮುಗಿಲ್ ಪೇಟೆ ಸಿನಿಮಾ ನವಂಬರ್ 19 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ತನಗೆ ಯಶಸ್ಸು ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿ ಮನೋರಂಜನ್ ಇದ್ದಾರೆ. ಇದೂ ಕೂಡಾ ರೊಮ್ಯಾಂಟಿಕ್ ಎಂಟರ್ ಟೈನರ್ ಸಿನಿಮಾ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲೀಗ ಸೂತಕದ ಛಾಯೆ