Publish Date: Wed, 03 Nov 2021 (09:20 IST)
Updated Date: Wed, 03 Nov 2021 (09:52 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸೂತಕದ ಛಾಯೆ ಆವರಿಸಿದೆ.
ಹೊಸ ಸಿನಿಮಾಗಳ ಘೋಷಣೆ, ರಿಲೀಸ್ ಡೇಟ್ ಅನೌನ್ಸ್ ಎಂದು ಗಿಜಿಗುಡುತ್ತಿದ್ದ ಚಿತ್ರರಂಗ ಕಳೆದ ಐದು ದಿನಗಳಿಂದ ಸ್ತಬ್ಧವಾಗಿದೆ. ಎಲ್ಲೆಡೆ ಪವರ್ ಸ್ಟಾರ್ ಅಕಾಲಿಕ ನಿಧನದ ದುಃಖ ಆವರಿಸಿದೆ.
ಕೆಲವು ಸಿನಿಮಾಗಳ ಫಸ್ಟ್ ಲುಕ್ ರಿಲೀಸ್ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ಸದಾ ಹಸನ್ಮುಖಿಯಾಗಿದ್ದ ಎಲ್ಲಾ ಸ್ಟಾರ್ ಗಳಿಗೂ ಆತ್ಮೀಯರಾಗಿದ್ದ ಪುನೀತ್ ಸಾವು ಚಿತ್ರರಂಗದಲ್ಲಿ ಒಂದು ರೀತಿಯ ದಿಗ್ಭ್ರಮೆ ಮೂಡಿಸಿದೆ ಎನ್ನುವುದಕ್ಕೆ ಇದೇ ಸಾಕ್ಷಿ.