ಪುನೀತ್ ರಾಜಕುಮಾರ್ ಅವರ ನಿಧನದ ವೇಳೆ ಪೋಲಿಸರು ಎರಡು ರಾತ್ರಿ, ಹಗಲು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ಡಿಜಿ ಆಫೀಸ್ ನಲ್ಲಿ ಎಲ್ಲರನ್ನೂ ಕರೆದು ಅಭಿನಂದನೆ ತಿಳಿಸಿದ್ದೇನೆ. ಹೊರಗಿನಿಂದ ಬಂದು ಇಲ್ಲಿ ಕೆಲಸ ಮಾಡಿರುವ ಕಾನ್ಸ್ಟೇಬಲ್ ಸೇರಿ ಎಲ್ಲರಿಗೂ ಭತ್ಯೆ ಕೊಡ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.ಹತ್ತು ದಿನಗಳ ಒಳಗಾಗಿ ಅವರಿಗೆ ಸಿಗುವ ಹಾಗೆ ಮಾಡ್ತೀನಿ. ಕಾನ್ಸ್ಟೇಬಲ್ ಒಬ್ಬರಿಗೆ ಕಾಲು ಮುರಿದಿತ್ತು, ಅವರ ಜೊತೆ ನಾನೇ ಮಾತನಾಡಿದ್ದೇನೆ. ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಪೋಲಿಸರ ಶ್ರಮ ಬಹಳ ದೊಡ್ಡದಿದೆ, ಎಲ್ಲರಿಗೂ ಅಭಿನಂದನೆ ಸಲ್ಲಿಸ್ತೇನೆ. ಸಿಎಂ ನೇತೃತ್ವದಲ್ಲಿ ನಾವು ಎಲ್ಲರೂ ಸೇರಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.