Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪುನೀತ್ ಮನೆಗೆ ಭೇಟಿ ಕೊಟ್ಟ ಅಕ್ಕಿನೇನಿ ನಾಗಾರ್ಜುನ

ನಾಗಾರ್ಜುನ ಅಕ್ಕಿನೇನಿ
ಬೆಂಗಳೂರು: ಮೊನ್ನೆಯಷ್ಟೇ ಇಹಲೋಕ ತ್ಯಜಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಇಂದು ತೆಲುಗು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಭೇಟಿ ನೀಡಿದ್ದಾರೆ.

ಪುನೀತ್ ನಿವಾಸಕ್ಕೆ ಭೇಟಿ ನೀಡಿದ ನಾಗಾರ್ಜುನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಅವರನ್ನು ಬರಮಾಡಿಕೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗಾರ್ಜುನ ‘ಇಷ್ಟು ಒಳ್ಳೆಯ ವ್ಯಕ್ತಿಯನ್ನು ಯಾಕೆ ದೇವರು ಇಷ್ಟು ಬೇಗ ಕರೆಸಿಕೊಂಡ ಎನ್ನುವುದೇ ಗೊತ್ತಾಗುತ್ತಿಲ್ಲ. ಪುನೀತ್ ಯಾವಾಗ ಸಿಕ್ಕರೂ ಒಳ್ಳೆಯ ಮಾತನಾಡುತ್ತಿದ್ದರು. ಅವರ ಕುಟುಂಬಕ್ಕೆ ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ. ದುಃಖ ಭರಿಸುವ ಶಕ್ತಿ ಕೊಡಲಿ ಎಂದೇ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಕಾಣಿಸುತ್ತಿದೆ ಒಗ್ಗಟ್ಟಿನ ದರ್ಶನ