ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ಮುಗಿಸಿದ್ದ ಜೇಮ್ಸ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿವೆ.
ಜೊತೆಗೆ ಹಾಡಿನ ಚಿತ್ರೀಕರಣವೂ ಬಾಕಿಯಿತ್ತು ಎನ್ನಲಾಗಿದೆ. ಹಾಗಿದ್ದರೂ ಸಿನಿಮಾ ತಂಡ ಸಿನಿಮಾ ಪೂರ್ತಿ ಮಾಡಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಆದರೆ ಡಬ್ಬಿಂಗ್ ಕೆಲಸಗಳು ಮುಗಿದಿರಲಿಲ್ಲ. ಹೀಗಾಗಿ ಈಗ ಪುನೀತ್ ಗೆ ಧ್ವನಿ ನೀಡುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ ಪುನೀತ್ ಗೆ ಶಿವಣ‍್ಣ ಧ್ವನಿ ನೀಡುವ ಸಾಧ‍್ಯತೆಯಿದೆ. ಮುಂದಿನ ವರ್ಷ ಅಪ್ಪು ಜನ್ಮ ದಿನಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.