Publish Date: Tue, 02 Nov 2021 (09:00 IST)
Updated Date: Tue, 02 Nov 2021 (09:19 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿದ್ದ ಜೇಮ್ಸ್ ಸಿನಿಮಾ ಬಗ್ಗೆ ಚಿತ್ರತಂಡ ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ.
ಜೇಮ್ಸ್ ಬಹುತೇಕ ಚಿತ್ರೀಕರಣ ಪೂರೈಸಿತ್ತು. ಪುನೀತ್ ಭಾಗಿಯಾಗಬೇಕಿದ್ದ ಹಾಡಿನ ದೃಶ್ಯಗಳು ಬಾಕಿಯಿದ್ದವು ಎನ್ನಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆಯಾಗುವ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನವಿತ್ತು.
ಆದರೆ ಜೇಮ್ಸ್ ತೆರೆಗೆ ಬರುವುದು ಖಚಿತ. ಮುಂದಿನ ವರ್ಷ ಮಾರ್ಚ್ ವೇಳೆಗೆ ಚಿತ್ರ ಹೊರಬರಲಿದೆ ಎನ್ನಲಾಗಿದೆ. ಹೀಗಾಗಿ ಕೊನೆಯ ಬಾರಿಗೆ ಪುನೀತ್ ರನ್ನು ಬೆಳ್ಳಿ ಪರದೆ ಮೇಲೆ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.