Publish Date: Sun, 31 Oct 2021 (19:38 IST)
Updated Date: Sun, 31 Oct 2021 (19:44 IST)
ಪುನೀತ್ ರಾಜ್ ಕುಮಾರ್ ನಿಧನಕ್ಕೆ ಮೈಸೂರಿನ ಶಕ್ತಿಧಾಮದ ಮಕ್ಕಳು ಹಾಗೂ ಮಹಿಳೆಯರು ಕಂಬನಿಗೈಯ್ದಿದ್ದಾರೆ. ಶಕ್ತಿಧಾಮದಲ್ಲಿ ಇಂದು ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತಮ್ಮೊಡನೆ ಬೆರೆತ ಪುನೀತ್ ರಾಜ್ ಕುಮಾರ್ ಅವರ ನೆನಪುಗಳನ್ನು ಮಕ್ಕಳು ಮೆಲುಕು ಹಾಕಿದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬಂದ 16 ಲಕ್ಷ ರೂಪಾಯಿ ಹಣವನ್ನು ಶಕ್ತಿಧಾಮಕ್ಕೆ ಕೊಟ್ಟ ಅಪ್ಪುವಿನ ಹೃದಯ ವೈಶಾಲತೆ ಹಾಗೂ ಉದಾರತೆಯನ್ನು ಈ ವೇಳೆ ಪ್ರಶಂಸಿದರು. ಮೂರು ಎಕರೆ ಪ್ರದೇಶದಲ್ಲಿ ಶಾಲೆಯೊಂದನ್ನು ನಿರ್ಮಿಸಲು ಕನಸು ಕಂಡಿದ್ದರು ಎಂದು ಇದೇ ವೇಳೆ ಸ್ಮರಿಸಿದರು.