Select Your Language

Notifications

webdunia
webdunia
webdunia
webdunia

ಪುನೀತ್‍ರಾಜ್‍ಕುಮಾರ್ ಪಾರ್ಥೀವ ಶರೀರ ತೆಗೆದುಕೊಂಡು ಹೋಗುವ ಮಾರ್ಗ

ಪುನೀತ್‍ರಾಜ್‍ಕುಮಾರ್ ಪಾರ್ಥೀವ ಶರೀರ ತೆಗೆದುಕೊಂಡು ಹೋಗುವ ಮಾರ್ಗ
bangalore , ಶನಿವಾರ, 30 ಅಕ್ಟೋಬರ್ 2021 (21:30 IST)
ನಟ ಪುನೀತ್‍ರಾಜ್‍ಕುಮಾರ್ ಪಾರ್ಥೀವ ಶರೀರ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಹೋಗುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಗಳಿದ್ದು, ಸಂಚಾರ ಪೆÇಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. 
ಅಭಿಮಾನಿಗಳು ಕೊನೆಯದಾಗಿ ಪುನೀತ್ ಅವರ ಅಂತಿಮ ದರ್ಶನ ಪಡೆಯಲೆಂದು ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗೆ 13 ಕಿ.ಮೀ. ದೂರ ಅಪ್ಪು ಪಾರ್ಥೀವ ಶರೀರ ಮೆರವಣಿಗೆ ಸಾಗಲಿದೆ. ಸುಮಾರು ಮೂರು ಗಂಟೆಗಳ ಕಾಲ ಮೆರವಣಿಗೆ ಸಾಗಲಿದೆ ಎನ್ನಲಾಗುತ್ತಿದೆ.
ಪಾರ್ಥೀವ ಶರೀರ ತೆಗೆದುಕೊಂಡು ಹೋಗುವ ಮಾರ್ಗ:
ಕಂಠೀರವ ಕ್ರೀಡಾಂಗಣ ಹಿಂಭಾಗದ ದ್ವಾರದಲ್ಲಿ ಮೆರವಣಿಗೆ ಪ್ರಾರಂಭಿಸಿ, ಆರ್‍ಆರ್‍ಎಂಆರ್ ರಸ್ತೆ, ಹಡ್ಸನ್ ವೃತ್ತ, ಪೆÇಲೀಸ್ ಕಾರ್ನರ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೆÇೀಸ್ಟ್ ಆಫೀಸ್ ರಸ್ತೆ, ಕೆ.ಆರ್. ವೃತ್ತದಲ್ಲಿ ಎಡಕ್ಕೆ ತಿರುಗಿ ಶೇಷಾದ್ರಿ ರಸ್ತೆ, ಮಹಾರಾಣಿ ಮೇಲು ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುವು ಪಡೆದು ಟಿ. ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಆಫ್ ರ್ಯಾಂಫ್, ಪಿ.ಜಿ. ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್‍ನಲ್ಲಿ ಬಲ ತಿರುವು ಪಡೆದು ಮಾರಮ್ಮ ವೃತ್ತ, ಬಿಎಚ್‍ಇಎಲ್ ಸರ್ವೀಸ್ ರಸ್ತೆ, ಬಿಎಚ್‍ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೊ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ ಥಿಯೇಟರ್ ಜಂಕ್ಷನ್, ಆರ್‍ಎಂಸಿ ಯಾರ್ಡ್ ಪೆÇಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಎಇಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‍ಟಿಐ ವೃತ್ತ ಮಾರ್ಗವಾಗಿ ಸಾಗಿ ಕಂಠೀರವ ಸ್ಟುಡಿಯೋಗೆ ತಲುಪಲಿದೆ.
ರಾಜ್ಯ ಪೆÇಲೀಸ್ ಮಹಾ ನಿರ್ದೇಶಕ ಪ್ರವೀಣ್‍ಸೂದ್, ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದ್ದು, ಇ್ಬಬರು ಹೆಚ್ಚವರಿ ಪೆÇಲೀಸ್ ಆಯುಕ್ತರು,19 ಮಂದಿ ಡಿಸಿಪಿಗಳು ಹಾಗೂ ಎಸಿಪಿಗಳು, 8000 ಸಾವಿರ ಮಂದಿ ಕಾನೂನು ಸುವ್ಯವಸ್ಥೆ ಸಿಬ್ಬಂದಿ, 35 ಸಿಎಆರ್ ತುಕಡಿಗಳು ಹಾಗೂ 90 ಕೆಎಸ್‍ಆರ್‍ಪಿ ತುಕಡಿಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ ಎಂದು ಪೆÇಲೀಸ್ ಮೂಲಗಳಿಂದ ತಿಳಿದುಬಂದಿದೆ. 
 
ವಾಹನ ಸಂಚಾರ ಮಾರ್ಗ ಬದಲಾವಣೆ :
ಪುನೀತ್ ರಾಜಕುಮಾರ್ ಪಾರ್ಥೀವ ಶರೀರ ಮೆರವಣಿಗೆ ಸಾಗುವುದರಿಂದ ಸಂಚಾರ ಪೆÇಲೀಸರು ನಗರದ ಕೆಲವು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಪರ್ಯಾಯ ಮಾರ್ಗ ಕೈಗೊಂಡಿದ್ದಾರೆ.  
ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ವಾಹನಗಳು,  ನೈಸ್ ರಸ್ತೆ, ನಾಯಂಡಹಳ್ಳಿ, ನಾಗರಬಾವಿ ಹಾಗೂ ಸುಮನಹಳ್ಳಿ ಜಂಕ್ಷನ್ ಮಾರ್ಗವಾಗಿ ತೆರಳವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. 
ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಮೇಲುಸೇತುವೆ ಮೇಲೆ  ಹೋಗುವ ವಾಹನಗಳು, ತುಮಕೂರು ರಸ್ತೆಯಿಂದ  ಮೈಸೂರು ರಸ್ತೆ ಕಡೆಗೆ ಸಿಎಂಟಿಐ ಜಂಕ್ಷನ್ ನಲ್ಲಿ  ಚಲಿಸಬಹುದು. 
ಜಾಲಹಳ್ಳಿ ಕ್ರಾಸ್ ಕಡೆಯಿಂದ ರಾಜಕುಮಾರ್‍ಸಮಾಧಿ ಕಡೆಗೆ ಹೋಗುವ ವಾಹನಗಳು, ಟಿವಿಎಸ್ ಕ್ರಾಸ್ ಮತ್ತು ಸೋನಾಲ್ ಗಾರ್ಮೆಂಟ್ಸ್ ಮಾರ್ಗವಾಗಿ ತೆರಳಬಹುದಾಗಿದೆ. 
ಮಹಾಲಕ್ಷ್ಮಿಬಡಾವಣೆ ಕಡೆಯಿಂದ ರಾಜಕುಮಾರ್‍ಸಮಾಧಿ ಕಡೆಗೆ ಹೋಗುವ ವಾಹನಗಳು, ಕೃಷ್ಣಾನಂದ ನಗರ ಜಂಕ್ಷನ್ ಬಳಿ ಮಾರ್ಗವಾಗಿ ಚಲಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ತಿಳಿಸಿದ್ದಾರೆ. 
ನೈಸ್ ರಸ್ತೆ ಬಳಕೆ ಸೂಕ್ತ:
ತುಮಕೂರು ರಸ್ತೆ ಮಾರ್ಗವಾಗಿ ಬರುವ ವಾಹನಗಳು ಬಿಐಇಸಿ ಬಳಿ ನೈಸ್ ರಸ್ತೆ ಮೂಲಕ ಮೈಸೂರು ರಸ್ತೆ ಹಾಗೂ ಬಳ್ಳಾರಿ ರಸ್ತೆ ಕಡೆಗೆ ಸಂಚರಿಸುವುದು ಸೂಕ್ತವಾಗಿದೆ. ಏಕೆಂದರೆ, ನಗರದಲ್ಲಿ ಪಾರ್ಥೀವ ಶರೀರ ಮೆರವಣಿಗೆ ಹಿನ್ನಲೆಯಲ್ಲಿ ರಸ್ತೆ ಸಂಚಾರ ವ್ಯತ್ಯವಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುನ್ನೆಚರಿಕೆ ಕ್ರಮವಾಗಿ ಸಂಚಾರದಲ್ಲಿ ಮಾರ್ಪಡು ಮಾಡಿಕೊಳ್ಳಬೇಕಾಗುತ್ತದೆ  ಎಂದು ಪೆÇಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ರಾಜ್ಯೋತ್ಸವಕ್ಕೆ 500 ಜನರ ಮಿತಿಗೊಳಿಸಿ, ಮಾರ್ಗಸೂಚಿ ಪ್ರಕಟಿಸಿದ ಸರಕಾರ