Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರಾಜಕೀಯ ದುರುದ್ದೇಶದ ಆರೋಪ : ಕುಂದಚೇರಿ ಗ್ರಾ.ಪಂ ಅಸಮಾಧಾನ

webdunia
ಶನಿವಾರ, 30 ಅಕ್ಟೋಬರ್ 2021 (21:13 IST)
ಮಡಿಕೇರಿ ಅ.30 : ಕುಂದಚೇರಿ ಗ್ರಾ.ಪಂ ನೂತನ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ಗ್ರಾಮಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಆದರೆ ಕೆಲವರು ರಾಜಕೀಯ ದುರುದ್ದೇಶದಿಂದ ಕಟ್ಟಡ ನಿರ್ಮಾಣದ ಕುರಿತು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಗ್ರಾ.ಪಂ ಅಧ್ಯಕ್ಷೆ ಸಿ.ಯು.ಸವಿತ ಹಾಗೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಸಭೆಯಲ್ಲಿ ಮಾತನಾಡಿದ ಅವರು ಹಲವು ಬಾರಿ ಸೋತಿರುವ ನಾಲ್ವರು ಜನಪರವಾದ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಇವರುಗಳ ಆರೋಪ ದುರುದ್ದೇಶಪೂರಿತವೆಂದು ಪ್ರಕಟಿಸಿದ್ದಾರೆ.
ಸುಮಾರು 42 ವರ್ಷಗಳ ಹಿಂದಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ, ನೂತನ ಕಟ್ಟಡ ನಿರ್ಮಾಣಕ್ಕೆ ವಿವಿಧ ಹಣಕಾಸು ಕ್ರಿಯಾ ಯೋಜನೆಡಿ 34.62 ಲಕ್ಷ ರೂ. ಈಗ ಕಟ್ಟಡ ಕಾಮಗಾರಿಗೆ ಸಂಬೋಧಿಸಿದ ಹಲವು ಇಲಾಖೆಗಳ ಅನುಮತಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಂದಾಜು ಪಟ್ಟಿಯನ್ನು ಕೂಡ ತಯಾರಿಸಲಾಗಿದೆ, ಕಟ್ಟಡ ನಿರ್ಮಾಣ ಕಾರ್ಯ ಕಾನೂನುಬದ್ಧವಾಗಿ ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ದುರುದ್ದೇಶದ ಹೇಳಿಕೆಗಳನ್ನು ಬಿಟ್ಟು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ವಿ.ಪ್ರವೀಣ್ ಕುಮಾರ್ (ವಿಶು), ಸದಸ್ಯರುಗಳಾದ ಕೆ.ಯು.ಹ್ಯಾರಿಸ್, ಪಿ.ಬಿ.ದಿನೇಶ್ ಹಾಗೂ ಬೇಬಿ ಪೊನ್ನಪ್ಪ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಾದ್ಯಂತ 50 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ; ಆರಗ ಜ್ಞಾನೇಂದ್ರ