Select Your Language

Notifications

webdunia
webdunia
webdunia
webdunia

ದಾಖಲೆಯ 105 ಕೋಟಿ ಡೋಸ್ ಕೋವಿಡ್ ವ್ಯಾಕ್ಸಿನೇಷನ್ ನೀಡಿದ ಭಾರತ...!

India has given a record 105 crore dose of Covid vaccination
bangalore , ಶನಿವಾರ, 30 ಅಕ್ಟೋಬರ್ 2021 (21:19 IST)
ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ದಾಖಲೆಯ ವೇಗ ಪಡೆಯುತ್ತಿದೆ. ನಿನ್ನೆ ಅ.29ರ ವೇಳೆಗೆ 105 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಒಂದೇ ದಿನ 51 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದು, ಈಗ 105 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಭಾರತ ಲಸಿಕಾ ಅಭಿಯಾನದಲ್ಲಿ ದಾಖಲೆ ಸೃಷ್ಟಿಸಿದೆ.
ದೇಶದಲ್ಲಿ ಜನವರಿ 16ರಂದು ಕೊರೋನಾ ಲಸಿಕೆಯ ಬೃಹತ್ ಅಭಿಯಾನ ಆರಂಭವಾಗಿತ್ತು. ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್ ಗೆ ಲಸಿಕೆ ನೀಡಲಾಯಿತು. ನಂತರ ಮಾರ್ಚ್ 1ರಿಂದ ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು.
ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಈ ಮೂಲಕ ಅ.21ರಂದು ಭಾರತ 100 ಕೋಟಿ ಕೊರೋನಾ ಲಸಿಕೆ ನೀಡಿಕೆಯ ದಾಖಲೆ ಬರೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ದುರುದ್ದೇಶದ ಆರೋಪ : ಕುಂದಚೇರಿ ಗ್ರಾ.ಪಂ ಅಸಮಾಧಾನ