Publish Date: Tue, 02 Nov 2021 (15:57 IST)
Updated Date: Tue, 02 Nov 2021 (16:01 IST)
ಪುನೀತ್ ರಾಜ್ ಕುಮಾರ್ ಸಮಾಧಿಗೆ ಇಂದು ಹಾಲು-ತುಪ್ಪ ಇಡುವ ಕಾರ್ಯ ನಡೆಯಿತು. ಕಾರ್ಯದ ಹಿನ್ನಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಬಳಿ ಬಂದಿದ್ದ ರಾಘವೇಂದ್ರ ರಾಜ್ ಕುಮಾರ್,ಇಂದಿನಿಂದಲೇ ಅಭಿಮಾನಿಗಳ,ಪುನೀತ್ ಸಮಾಧಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ರು.ಅಪ್ಪಾಜಿಗೆ ದೇವರು 76 ವರ್ಷ ಕೊಟ್ಟಿದ್ದರು. ಅಪ್ಪುಗೆ 46 ವರ್ಷ ಕೊಟ್ಟಿದ್ದಾನೆ. ಇಲ್ಲೂ ನಾವು ನೆಮ್ಮದಿ ಪಡಬೇಕು. ಅಪ್ಪು ಕಣ್ಣುಗಳು ನಾಲ್ಕು ಜನರಿಗೆ ಬೆಳಕು ಕೊಟ್ಟಿವೆ. ಸರ್ಕಾರ ಹಾಗೂ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ರೆ ಅದು ಕಡಿಮೆ ಎಂದರು. ನಮ್ಮ ಕುಟುಂಬದ ಮೇಲೆ ನೀವು ಪ್ರಾಣವನ್ನೇ ಇಟ್ಟಿದ್ದೀರಿ. ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಎಡೆ ಇಟ್ಟಿದ್ದೇವೆ. ಎಲ್ಲರಿಗೂ ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದಿದ್ದಾರೆ. ಪುನೀತ್ ಹೆಸರನ್ನ ರಸ್ತೆಗಳಿಗೆ ಇಟ್ಟಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ