ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೇ ಕ್ಷಣದ ಸಿಸಿಟಿವಿ ದೃಶ್ಯಾವಳಿಗಳು ಈಗ ವೈರಲ್ ಆಗಿದೆ.
ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಪತ್ನಿ ಅಶ್ವಿನಿ ಜೊತೆ ನಡೆದುಕೊಂಡೇ ಗೇಟಿನವರೆಗೆ ಆರಾಮವಾಗಿ ನಡೆದುಕೊಂಡಿದ್ದ ಪುನೀತ್ ಕಾರು ಏರುತ್ತಾರೆ. ಎರಡೇ ನಿಮಿಷದಲ್ಲಿ ಡಾ.ರಮಣ್ ರಾವ್ ಕ್ಲಿನಿಕ್ ಗೆ ಬರುತ್ತಾರೆ.
ಮನೆಯಿಂದ ಹೊರಡುವ ಮೊದಲು ಪುನೀತ್ ಸಹಾಯಕ ಗಡಿಬಿಡಿಯಲ್ಲಿ ಬಂದು ಏನನ್ನೋ ಪುನೀತ್ ಕೈಗೆ ನೀಡುವುದು ಕಂಡುಬರುತ್ತದೆ. ಆದರೆ ಆರಾಮವಾಗಿ ನಡೆದುಕೊಂಡಿದ್ದ ಪುನೀತ್ 15 ನಿಮಿಷಗಳಲ್ಲೇ ಇಹಲೋಕ ತ್ಯಜಿಸುತ್ತಾರೆ ಎಂದರೆ ಯಾರಿಗೂ ಊಹಿಸಲೂ ಸಾಧ‍್ಯವಾಗದು.