Publish Date: Wed, 03 Nov 2021 (10:44 IST)
Updated Date: Wed, 03 Nov 2021 (10:50 IST)
ಚೆನ್ನೈ: ತಮಿಳಿನ ಜೈ ಭೀಮ್ ಸಿನಿಮಾದಲ್ಲಿ ಹಿಂದಿ ಮಾತನಾಡಿದ್ದಕ್ಕೆ ಸಹ ಪಾತ್ರಧಾರಿಗೆ ಕಪಾಳ ಮೋಕ್ಷ ಮಾಡಿದ್ದಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ.
ಜೈ ಭೀಮ್ ಸಿನಿಮಾದಲ್ಲಿ ಹಿಂದಿ ಮಾತನಾಡುವ ಪಾತ್ರಧಾರಿ ಮೇಲೆ ಪ್ರಕಾಶ್ ರಾಜ್ ಕೈ ಮಾಡುತ್ತಾರೆ. ಇದು ಸಿನಿಮಾದ ಸನ್ನಿವೇಶವಾದರೂ ಹಿಂದಿ ಮಾತನಾಡಿದ್ದಕ್ಕೆ ಕೆನ್ನೆಗೆ ಹೊಡೆಯುವ ದೃಶ್ಯ ಹಿಂದಿ ಭಾಷಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಿಜ ಜೀವನದಲ್ಲೂ ಪ್ರಕಾಶ್ ರಾಜ್ ಹಿಂದಿ ಹೇರಿಕೆ ವಿರೋಧಿಸಿದ್ದರು. ಈಗ ಸಿನಿಮಾದಲ್ಲೂ ಇಂತಹದ್ದೇ ಸಂದೇಶ ನೀಡಿದ್ದು, ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.