Publish Date: Wed, 03 Nov 2021 (17:49 IST)
Updated Date: Wed, 03 Nov 2021 (17:51 IST)
ಬೆಂಗಳೂರು: ಸಹೋದರ ಪುನೀತ್ ರಾಜ್ ಕುಮಾರ್ ಅಗಲುವಿಕೆಯ ದುಃಖದಲ್ಲಿರುವ ಶಿವರಾಜ್ ಕುಮಾರ್ ನಿವಾಸಕ್ಕೆ ಇಂದು ಟಾಲಿವುಡ್ ನಟ ರಾಮ್ ಚರಣ್ ತೇಜ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ನಿನ್ನೆ ತೆಲುಗು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಪುನೀತ್ ಮನೆಗೆ ಭೇಟಿ ನೀಡಿದ್ದರು. ಬಳಿಕ ಶಿವಕಾರ್ತಿಕೇಯನ್ ಕೂಡಾ ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಇಂದು ರಾಮ್ ಚರಣ್ ತೇಜ್ ಭೇಟಿ ನೀಡಿದ್ದು, ಶಿವಣ‍್ಣನ ಜೊತೆ ಕೆಲವು ಹೊತ್ತು ಸಾಂತ್ವನದ ಮಾತನಾಡಿದ್ದಾರೆ. ಬಳಿಕ ಪುನೀತ್ ಫೋಟೋಗೆ ಪುಷ್ಪ ನಮನ ಸಲ್ಲಿಸಿದರು.