Publish Date: Sun, 07 Nov 2021 (08:55 IST)
Updated Date: Sun, 07 Nov 2021 (09:13 IST)
ಬೆಂಗಳೂರು: ಕಳೆದ ವಾರ ನಮ್ಮನ್ನಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ಥಿಯೇಟರ್ ಗಳಲ್ಲಿ ಗೌರವ ಸಲ್ಲಿಸಲಾಗುತ್ತಿದೆ.
ಇಂದು ಥಿಯೇಟರ್ ಗಳಲ್ಲಿ ಪುನೀತ್ ಭಾವಚಿತ್ರವಿರಿಸಿ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಜೊತೆಗೆ ಅವರ ಆತ್ಮಕ್ಕೆ ಶಾಂತಿ ಕೋರಿ ಮೋಂಬತ್ತಿ ಹಚ್ಚಿ ಪ್ರಾರ್ಥನೆ ನಡೆಸಲಾಗುತ್ತದೆ.
ಇದೇ ವೇಳೆ ಪುನೀತ್ ಕುರಿತ ಹಾಡೂ ಬಿಡುಗಡೆಯಾಗಲಿದೆ. ಈಗಾಗಲೇ ರಾಜ್ಯಾದ್ಯಂತ ಹಲವು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪೂಜೆ ಸಲ್ಲಿಸಿ ನೆಚ್ಚಿನ ನಟನ ಸಾವಿನ ದುಃಖ ಪ್ರಕಟಿಸುತ್ತಿದ್ದಾರೆ. ಇದೀಗ ಥಿಯೇಟರ್ ಮಾಲಿಕರು ಅಗಲಿದ ನಟನಿಗೆ ಗೌರವ ಸಲ್ಲಿಸಲು ಮುಂದೆ ಬಂದಿದ್ದಾರೆ.