Select Your Language

Notifications

webdunia
webdunia
webdunia
Sunday, 6 April 2025
webdunia

ಡಾಲಿ ಧನಂಜಯ್ ತೆಕ್ಕೆಯಲ್ಲಿದೆ ಸಿನಿಮಾಗಳ ಗೊಂಚಲು

ಡಾಲಿ ಧನಂಜಯ್
ಬೆಂಗಳೂರು , ಸೋಮವಾರ, 8 ನವೆಂಬರ್ 2021 (11:30 IST)
ಬೆಂಗಳೂರು: ಪೋಷಕ ಪಾತ್ರಕ್ಕೂ ಸೈ, ನಾಯಕನಾಗಲೂ ಸೈ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲಾ ರೀತಿಯ ಪಾತ್ರಗಳಿಗೆ ಸೈ ಎನಿಸಿಕೊಂಡಿರುವ ನಟ ಎಂದರೆ ಡಾಲಿ ಧನಂಜಯ್ ಪ್ರಮುಖರು.

ಡಾಲಿ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಆ ಪೈಕಿ ಕೆಲವಕ್ಕೆ ಅವರು ನಾಯಕರಾದರೆ, ಇನ್ನು ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರ ಮುಂಬರುವ ಚಿತ್ರಗಳ ಲಿಸ್ಟ್ ನೋಡೋಣ.

ಈ ತಿಂಗಳು ಡಾಲಿ ಧನಂಜಯ್ ಅಭಿನಯದ ಸಲಗ, ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆಯಾಗಿದೆ. ಇದಲ್ಲದೆ, ಶಿವರಾಜ್ ಕುಮಾರ್ ನಾಯಕರಾಗಿರುವ ಭೈರಾಗಿ, ಜಗ್ಗೇಶ್ ನಾಯಕರಾಗಿರುವ ತೋತಾಪುರಿಯಲ್ಲಿ ಧನಂಜಯ್ ಅಭಿನಯಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಅವರೇ ನಾಯಕರಾಗಿರುವ ಬಡವ ರಾಸ್ಕಲ್, ಮಾನ್ಸೂನ್ ರಾಗ ಬಿಡುಗಡೆಯ ಹೊಸ್ತಿಲಲ್ಲಿದೆ. ಇನ್ನು ನಟನೆ ಜೊತೆಗೆ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿರುವ ಸಿನಿಮಾ ಹೆಡ್‍ ಬುಷ್ ಚಿತ್ರೀಕರಣದ ಹಂತದಲ್ಲಿದೆ.

ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲೂ ಧನಂಜಯ್ ಮೋಡಿ ಮಾಡುತ್ತಿದ್ದು, ಬಹುನಿರೀಕ್ಷಿತ ‘ಪುಷ್ಪ’ ನಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇದಲ್ಲದೆ, ತಮಿಳಿನಲ್ಲಿ ಪಾಯುಂ ಒಲಿ ನೀ ಎನಕ್ಕು ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೆ, ಕನ್ನಡ ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ’21 Hours’ ಎಂಬ ಸಿನಿಮಾದಲ್ಲೂ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಪುಣ್ಯ ಸ್ಮರಣೆ : ಸಾರ್ವಜನಿಕರಿಗೆ ಪ್ರವೇಶ ಯಾವಾಗ?