Publish Date: Mon, 08 Nov 2021 (18:15 IST)
Updated Date: Mon, 08 Nov 2021 (18:18 IST)
ತೆಲುಗು ನಟ ಸಿದ್ಧಾರ್ಥ್,ನಟ ಪುನೀತ್ ರಾಜ್ ಕುಮಾರ್ ಸಮಾಧಿ ದರ್ಶನ ಪಡೆದಿದ್ದಾರೆ. ಈ ವೇಳೆ ನಟ ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ. ಇಂದು ಪುನೀತ್ 11 ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ಸ್ಥಳಕ್ಕೆ ಸಿದ್ಧಾರ್ಥ್ ಭೇಟಿ ನೀಡಿದ್ದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧಾರ್ಥ್, ನಟ ಪುನೀತ್ ರಾಜ್ ಕುಮಾರ್ ನಟನೆ, ಅವರ ಚಿತ್ರಗಳು ಎಂದೂ ಮರೆಯಲಾಗದಂತದ್ದು. ಅವರು ಎಲ್ಲರಿಗೂ ಮಾದರಿ ಆಗಿದ್ದರು. ಅವರು ಇಲ್ಲ ಎಂದು ನಂಬಲು ಆಗುತ್ತಿಲ್ಲ. ನಾನು ಅನೇಕ ಬಾರಿ ಅವರನ್ನು ಭೇಟಿಯಾಗಿದ್ದೆ. ಅವರ ಆದರ್ಶ, ಜೀವನ ಶೈಲಿ ನನಗೂ ಮಾದರಿಯಾಗಿದೆ ಎಂದರು.