Select Your Language

Notifications

webdunia
webdunia
webdunia
webdunia

ಭಾವೀ ಪತ್ನಿ ಕತ್ರಿನಾಗಾಗಿ ವಿಕ್ಕಿ ಕೌಶಾಲ್ ಖರೀದಿಸಿದ ಮನೆಯ ಬಾಡಿಗೆಯೆಷ್ಟು ಗೊತ್ತಾ?!

ಭಾವೀ ಪತ್ನಿ ಕತ್ರಿನಾಗಾಗಿ ವಿಕ್ಕಿ ಕೌಶಾಲ್ ಖರೀದಿಸಿದ ಮನೆಯ ಬಾಡಿಗೆಯೆಷ್ಟು ಗೊತ್ತಾ?!
ಮುಂಬೈ , ಮಂಗಳವಾರ, 9 ನವೆಂಬರ್ 2021 (09:07 IST)
ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ ನಲ್ಲಿ ಮದುವೆಯಾಗುತ್ತಿರುವ ವಿಚಾರ ಈಗಾಗಲೇ ಬಹಿರಂಗವಾಗಿದೆ.

ಇದೀಗ ವಿಕ್ಕಿ ಮದುವೆಯ ನಂತರ ತಮ್ಮ ಪತ್ನಿ ಜೊತೆ ವಾಸ ಮಾಡಲು ಐಷಾರಾಮಿ ಮನೆಯೊಂದನ್ನು ಬಾಡಿಗೆಗೆ ಪಡೆದ ಸುದ್ದಿ ಬಂದಿದೆ. ಮುಂಬೈನ ಜುಹೂನಲ್ಲಿ ಐಷಾರಾಮಿ ಫ್ಲ್ಯಾಟ್ ಒಂದನ್ನು ವಿಕ್ಕಿ ಬಾಡಿಗೆಗೆ ಪಡೆದುಕೊಂಡಿದ್ದಾರಂತೆ.

ಮುಂದಿನ ಐದು ವರ್ಷಕ್ಕೆ ಬಾಡಿಗೆಗೆ ನಿಗದಿಮಾಡಿಕೊಂಡಿದ್ದು, ಈ ಫ್ಲ್ಯಾಟ್ ಗೆ ಅವರು ಮಾಸಿಕವಾಗಿ ನೀಡಲಿರುವ ಬಾಡಿಗೆ ಆರಂಭದ ವರ್ಷ ಬರೋಬ್ಬರಿ 8 ಲಕ್ಷ ರೂ.ಗಳು. ಇದಾದ ಬಳಿಕ ಪ್ರತೀ ವರ್ಷಕ್ಕೆ 40 ಸಾವಿರದಷ್ಟು ಹೆಚ್ಚುವರಿ ಬಾಡಿಗೆ ನೀಡಲಿದ್ದಾರಂತೆ. ಈಗಾಗಲೇ ವಿಕ್ಕಿ ಅಡ್ವಾನ್ಸ್ ಆಗಿ 1.75 ಕೋಟಿ ರೂ. ಪಾವತಿ ಮಾಡಿದ್ದಾರೆ ಎಂಬ ಸುದ್ದಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಮನೆಯಿಂದ ಅನ್ನಸಂತರ್ಪಣೆ