Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿಂದು ಸಿನಿಮಾ ಧಮಾಕಾ

ಸ್ಯಾಂಡಲ್ ವುಡ್ ನಲ್ಲಿಂದು ಸಿನಿಮಾ ಧಮಾಕಾ
ಬೆಂಗಳೂರು , ಶುಕ್ರವಾರ, 12 ನವೆಂಬರ್ 2021 (08:26 IST)
ಬೆಂಗಳೂರು: ಮತ್ತೊಂದು ಶುಕ್ರವಾರ ಬಂದಿದ್ದು, ಗಾಂಧಿನಗರ ಮತ್ತೆ ಚಟುವಟಿಕೆಗೆ ಮರಳಿದೆ. ಅಪ್ಪು ಅಗಲುವಿಕೆಯ ನಂತರ ಸ್ಯಾಂಡಲ್ ವುಡ್ ನಲ್ಲಿ ಇಂದು ಎರಡು ಪ್ರಮುಖ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ನೆನಪಿರಲಿ ಪ್ರೇಮ್ ನಟಿಸಿರುವ ಪ್ರೇಮಂ ಪೂಜ್ಯಂ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಪಕ್ಕಾ ಲವ್ ಸ್ಟೋರಿಯಾಗಿದ್ದು, ಟ್ರೈಲರ್ ಮೂಲಕ ಈಗಾಗಲೇ ಜನರ ಗಮನ ಸೆಳೆದಿದೆ.

ಇದಲ್ಲದೆ, ಕೆಜಿಎಫ್ ಸಿನಿಮಾಗೆ ಡೈಲಾಗ್ ಬರೆದಿದ್ದ ರಾಘವ್ ವಿನಯ್ ಶಿವಗಂಗೆ ನಿರ್ದೇಶಿಸಿರುವ ‘ಟಾಮ್ ಆಂಡ್ ಜೆರ್ರಿ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಗಂಟು ಮೂಟೆ ಖ್ಯಾತಿಯ ನಿಶ್ಚಿತ ಕರೋಡಿ, ಜೋಡಿ ಹಕ್ಕಿ ಧಾರವಾಹಿ ಖ್ಯಾತಿಯ ಚೈತ್ರಾ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಸಬರ ಸಿನಿಮಾವಾದರೂ ಟ್ರೈಲರ್ ದಾಖಲೆಯ ವೀಕ್ಷಣೆ ಪಡೆದಿದೆ. ಪಕ್ಕಾ ಯೂಥ್ ಫುಲ್ ಸ್ಟೋರಿಯಾಗಿರುವುದರಿಂದ ಯುವಜನರಿಗೆ ಇಷ್ಟವಾಗಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಮದಗಜ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಆಶಿಕಾ ರಂಗನಾಥ್