Publish Date: Wed, 12 Jan 2022 (17:03 IST)
Updated Date: Wed, 12 Jan 2022 (17:05 IST)
ಹೈದರಾಬಾದ್: ಕೊರೋನಾ ಸೋಂಕಿತರಾಗಿದ್ದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಇದೀಗ ಚೇತರಿಸಿಕೊಂಡಿರುವ ಸುದ್ದಿ ಬಂದಿದೆ.
ಮತ್ತೆ ಕೊರೋನಾ ಪರೀಕ್ಷೆಗೊಳಗಾದ ತ್ರಿಷಾ ನೆಗೆಟಿವ್ ವರದಿ ಬಂದಿರುವುದಾಗಿ ಖುಷಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವರ್ಷಾರಂಭದಲ್ಲೇ ಕೊರೋನಾ ಸೋಂಕಿತರಾಗಿದ್ದ ತ್ರಿಷಾ ಮನೆಯಲ್ಲಿಯೇ ಕ್ವಾರಂಟೈನ್ ಗೊಳಗಾಗಿದ್ದರು. ಇದೀಗ ಮೊದಲ ಬಾರಿಗೆ ಜೀವನದಲ್ಲಿ ನೆಗೆಟಿವ್ ವರದಿ ಖುಷಿ ತಂದಿದೆ ಎಂದು ಹೇಳಿಕೊಂಡಿರುವ ತ್ರಿಷಾ ಎಂದಿನ ಕೆಲಸಕ್ಕೆ ರೆಡಿ ಎಂದಿದ್ದಾರೆ.