Select Your Language

Notifications

webdunia
webdunia
webdunia
Wednesday, 16 April 2025
webdunia

ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿಗೆ ಕೊರೋನಾ ಅಡ್ಡಿ?

ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್
ಮುಂಬೈ , ಮಂಗಳವಾರ, 11 ಜನವರಿ 2022 (09:40 IST)
ಮುಂಬೈ: ಭಾರತ ಮತ್ತು ದ.ಆಫ್ರಿಕಾ ನಡುವೆ ಕ್ರಿಕೆಟ್ ಸರಣಿ ಮುಗಿದ ಬಳಿಕ ಭಾರತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿ ನಡೆಯಲಿದೆ.

ಆದರೆ ಈಗ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿರುವುದು ನೋಡಿದರೆ ಈ ಪಂದ್ಯಕ್ಕೆ ಆತಂಕ ಎದುರಾಗಿದೆ. ಫೆಬ್ರವರಿ 6 ರಿಂದ ವಿಂಡೀಸ್ ವಿರುದ್ಧ ಕ್ರಿಕೆಟ್ ಸರಣಿ ಆರಂಭವಾಗಲಿದೆ.

ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಈಗ ಘೋಷಿಸಿರುವ ಎಲ್ಲಾ ಮೈದಾನಗಳಲ್ಲಿ ಪಂದ್ಯ ನಡೆಸಲು ಸಾಧ‍್ಯವಾಗದು. ಹೀಗಾದಲ್ಲಿ ಕೇವಲ ಸುರಕ್ಷಿತವಾಗಿರುವ ಒಂದೇ ತಾಣದಲ್ಲಿ ಎಲ್ಲಾ ಪಂದ್ಯಗಳು ನಡೆಯಬಹುದು. ವಿಂಡೀಸ್ ವಿರುದ್ಧ ಭಾರತ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯವಾಡಬೇಕಿದೆ. ಅದೂ ಪ್ರೇಕ್ಷಕರ ನಡುವೆ ನಡೆಯುವುದು ಅನುಮಾನ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ನಿರ್ಣಾಯಕ ಟೆಸ್ಟ್ ಇಂದಿನಿಂದ