Publish Date: Tue, 11 Jan 2022 (16:58 IST)
Updated Date: Tue, 11 Jan 2022 (16:59 IST)
ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೊರೋನಾ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿರುವ ಲತಾ ಮಂಗೇಶ್ಕರ್ ಗೆ ವಯಸ್ಸಿನ ಕಾರಣದಿಂದ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಐಸಿಯುವಿನಲ್ಲಿರಿಸಲಾಗಿದೆ.
92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಗೆ ಇದು ಎರಡನೇ ಬಾರಿ ಕೊರೋನಾ ಸೋಂಕು ತಗುಲಿದೆ. ಸದ್ಯಕ್ಕೆ ಸಣ್ಣ ಪ್ರಮಾಣದ ಲಕ್ಷಣಗಳಿವೆ ಎನ್ನಲಾಗಿದೆ.