Select Your Language

Notifications

webdunia
webdunia
webdunia
webdunia

ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಾಧೀಶರು, 150 ಸಿಬ್ಬಂದಿಗೆ ಕೊರೋನಾ ಸೋಂಕು ದೃಢ

ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಾಧೀಶರು, 150 ಸಿಬ್ಬಂದಿಗೆ ಕೊರೋನಾ ಸೋಂಕು ದೃಢ
bangalore , ಸೋಮವಾರ, 10 ಜನವರಿ 2022 (20:34 IST)
ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರು ಸೇರಿ ಒಟ್ಟಾರೆ 150 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟಾರೆ 32 ನ್ಯಾಯಾಧೀಶರಿದ್ದು, ನಾಲ್ವರಿಗೆ ಸೋಂಕು ತಗುಲಿದೆ. ಇನ್ನು ಸುಪ್ರೀಂ ಕೋರ್ಟ್‌ನ ಇತರೆ ಸಿಬ್ಬಂದಿಯಲ್ಲಿ ಒಟ್ಟಾರೆ 150 ಮಂದಿ ಕೊರೋನಾ ಬಾಧಿತರಾಗಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟಾರೆ ಮೂರು ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಶೇ.5 ರಷ್ಟು ಮಂದಿಗೆ ಸೋಂಕು ತಗುಲಿದೆ. ಸಂಪರ್ಕಕ್ಕೆ ಬಂದ ಉಳಿದವರ ಪರೀಕ್ಷೆ ಮಾಡಿದ್ದು, ವರದಿಯಾಗಿ ಕಾಯಲಾಗುತ್ತಿದೆ.
ಸಾಂಕ್ರಾಮಿಕ ಕೋವಿಡ್ ಸೋಂಕು ಮತ್ತು ಒಮಿಕ್ರಾನ್ ಹಠಾತ್ ಉಲ್ಬಣವನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಆವರಣಕ್ಕೆ ಪ್ರವೇಶಿಸುವ ನೋಂದಾವಣೆ ಸಿಬ್ಬಂದಿ, ಸಂಘಟಿತ ಏಜೆನ್ಸಿಗಳ ಸಿಬ್ಬಂದಿ, ವಕೀಲರು ಅವರ ಸಿಬ್ಬಂದಿ ಸೋಂಕಿನ ಯಾವುದೇ ಲಕ್ಷಣ ಇದ್ದರೂ ಪರೀಕ್ಷಿಸಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

UPI ತಾಂತ್ರಿಕ ದೋಷ: ಗೂಗಲ್ ಪೇ, ಪೇಟಿಎಂ ಬಳಕೆದಾರರಿಗೆ ಅಡಚಣೆ