Select Your Language

Notifications

webdunia
webdunia
webdunia
webdunia

55 ಗಂಟೆಗಳ ವೀಕೆಂಡ್ ಕರ್ಫ್ಯೂ ಅಂತ್ಯ: ಸಹಜಸ್ಥಿತಿಗೆ ಮರಳಿದ ರಾಜ್ಯ

55 ಗಂಟೆಗಳ ವೀಕೆಂಡ್ ಕರ್ಫ್ಯೂ ಅಂತ್ಯ: ಸಹಜಸ್ಥಿತಿಗೆ ಮರಳಿದ ರಾಜ್ಯ
bangalore , ಸೋಮವಾರ, 10 ಜನವರಿ 2022 (20:22 IST)
ಬೆಂಗಳೂರು:-ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿ ಮಾಡಲಾಗಿದ್ದ ವೀಕೆಂಡ್ ಕರ್ಫ್ಯೂ ಸೋಮವಾರ (ಜ.10) ಬೆಳಗ್ಗೆ ಅಂತ್ಯವಾಗಿದೆ. ಎರಡು ದಿನ ಬಂದ್ ಆಗಿದ್ದ ರಾಜ್ಯ ಮತ್ತೆ ಸಹಜಸ್ಥಿತಿಗೆ ಬಂದಿದೆ. ಆದರೆ ರಾಜ್ಯದಲ್ಲಿ 50:50 ರೂಲ್ಸ್, ನೈಟ್ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ರಾಜ್ಯದಲ್ಲಿ ಜಾರಿಯಲ್ಲಿದ್ದ ಈ ಟಫ್ ರೂಲ್ಸ್ ಇಂದು ಬೆಳಗ್ಗೆ 5 ಗಂಟೆಗೆ ಮುಕ್ತಾಯವಾಗಿದೆ.
ಸಹಜಸ್ಥಿತಿಗೆ ಮರಳಿದ ಜನಜೀವನ
ರಾಜ್ಯದಲ್ಲಿ ಮೊದಲ ವಾರದ ವೀಕೆಂಡ್ ಕರ್ಫ್ಯೂ ಅಂತ್ಯಗೊಳ್ಳುತ್ತಿದ್ದಂತೆ ಇಂದಿನಿಂದ ಶುಕ್ರವಾರದವರೆಗೆ ಜನಜೀವನ ಸಹಜಸ್ಥಿತಿಗೆ ಮರಳಿದೆ. ಬಹುತೇಕ ಮಾರ್ಕೆಟ್‌ನಲ್ಲಿ ಜನಜಂಗುಳಿ ಕಂಡು ಬಂದಿದೆ. ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೆ ಜನ ಭರ್ಜರಿ ವ್ಯಾಪಾರಕ್ಕೆ ಇಳಿದಿದ್ದಾರೆ. 5 ದಿನಗಳ ಕಾಲ ಎಂದಿನಂತೆ ಜನಜೀವನ ಇದ್ದು, ಶುಕ್ರವಾರದಿಂದ ಮತ್ತೆ ವೀಕೆಂಡ್ ಕರ್ಫ್ಯೂ ಇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಿನಿಮೀಯ ಶೈಲಿಯಲ್ಲಿ ಬೈಕ್ ಚಲಾಯಿಸಿದ ಸವಾರ