ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಾರಿ ಕೊರೊನಾ ಸೋಂಕಿಗೆ ಯುವ ಜನಾಂಗ ಹೆಚ್ಚು ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಎರಡನೇ ಅಲೆ ವೇಳೆಯಲ್ಲಿ ಕೊರೊನಾ ಸೋಂಕಿಗೆ ಯುವಕರೇ ಹೆಚ್ಚು ತುತ್ತಾಗಿದ್ದರು.
ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಯುವಜನತೆಗೆ ಹೆಚ್ಚು ಸೋಂಕು ಪತ್ತೆ ಆಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಬೆಂಗಳೂರು ನಗರದಲ್ಲಿ ಈಗಾಗಲೇ 32 ಸಾವಿರ ಸಕ್ರಿಯ ಕೇಸ್‌ಗಳಿವೆ. ಅದರಲ್ಲಿ 20 ಸಾವಿರ ಸೋಂಕಿತರು ಯುವಜನಾಂಗವೇ ಆಗಿದ್ದಾರೆ. ಮೂರನೇ ಅಲೆಯಲ್ಲಿ 20-39 ವರ್ಷದೊಳಗಿನ ಯುವಕರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದು, ಪ್ರತಿದಿನ ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಯುವಕರಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ. ಕಳೆದ ಐದು ದಿನದಲ್ಲಿ ಬರೊಬ್ಬರಿ 8 ಸಾವಿರ ಯುವಕರಲ್ಲಿ ಸೋಂಕು ಪತ್ತೆಯಾಗಿದೆ.