ಬೆಂಗಳೂರು: ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರವೇನೋ ಕರ್ಫ್ಯೂ, ಲಾಕ್ ಡೌನ್ ಎನ್ನುತ್ತಿದೆ. ಆದರೆ ಬಡವರು, ದಿನನಿತ್ಯದ ಕೂಲಿಯಿಂದ ಜೀವನ ಮಾಡುವವರಿಗೆ ಇದರಿಂದ ಕಷ್ಟವಾಗುತ್ತಿದೆ.
ಈ ಬಗ್ಗೆ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಧ್ವನಿಯೆತ್ತಿದ್ದಾರೆ. ಬಡ ವೃದ್ಧ ಮಹಿಳೆಯೊಬ್ಬಳು ತನ್ನ ದೈನಂದಿನ ಜೀವನದ ಪಾಡಿನ ಬಗ್ಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಪ್ರಕಟಿಸಿರುವ ಜೆಕೆ, ಅಸಮಾಧಾನ ಹೊರಹಾಕಿದ್ದಾರೆ.
ವಿಶ್ವದ ಅಂತ್ಯ ತುಂಬಾ ವಿನಾಶಕಾರಿಯಾಗಿರಬಹುದು ಎಂದುಕೊಂಡಿದ್ದೆ. ಆದರೆ ಇದನ್ನು ನೋಡಿದರೆ ಮಾನವೀಯತೆ ಸತ್ತು ವಿಶ್ವದ ಅಂತ್ಯವಾಗಬಹುದು ಎನಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!