Select Your Language

Notifications

webdunia
webdunia
webdunia
webdunia

11 ಬಾರಿ ಲಸಿಕೆ ಪಡೆದವನ ವಿರುದ್ಧ ಎಫ್ ಐಆರ್

11 ಬಾರಿ ಲಸಿಕೆ ಪಡೆದವನ ವಿರುದ್ಧ ಎಫ್ ಐಆರ್
ಪಾಟ್ನಾ , ಸೋಮವಾರ, 10 ಜನವರಿ 2022 (10:05 IST)
ಪಾಟ್ನಾ: ಒಂದೇ ವರ್ಷದಲ್ಲಿ 11 ಬಾರಿ ಲಸಿಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದ ವೃದ್ಧನ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಹಾರದ ಬ್ರಹ್ಮದೇವ್ ಎಂಬವರು ಒಂದೇ ವರ್ಷದಲ್ಲಿ 11 ಬಾರಿ ಲಸಿಕೆ ಪಡೆದುಕೊಂಡಿದ್ದಾಗಿ ಹೇಳಿದ್ದು, ಭಾರೀ ಸುದ್ದಿಯಾಗಿತ್ತು. ಇದೀಗ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಬೇರೆ ಬೇರೆ ದಾಖಲೆ ನೀಡಿ ಲಸಿಕೆ ಪಡೆದುಕೊಂಡಿರುವುದಾಗಿ ಬ್ರಹ್ಮದೇವ್ ತಪ್ಪೊಪ್ಪಿಕೊಂಡಿದ್ದಾರೆ. 12 ನೇ ಬಾರಿ ಲಸಿಕೆ ಪಡೆದುಕೊಳ್ಳಲು ಹೊರಟಿದ್ದಾಗ ಸಿಕ್ಕಿಬಿದ್ದಿದ್ದಾರೆ. ಲಸಿಕೆಯಿಂದ ತನ್ನ ಇತರ ಖಾಯಿಲೆಗಳು ವಾಸಿಯಾಗಿವೆ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ದಾಖಲೆ ನೀಡಿ ಲಸಿಕೆ ತೆಗೆದುಕೊಂಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ಸಾಹಿತಿ ಚಂಪಾ ಇನ್ನಿಲ್ಲ