Select Your Language

Notifications

webdunia
webdunia
webdunia
webdunia

ಖಾಸಗಿ ಫೋಟೋ ಇಟ್ಟುಕೊಂಡು ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದವ ಅರೆಸ್ಟ್

ಖಾಸಗಿ ಫೋಟೋ ಇಟ್ಟುಕೊಂಡು ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದವ ಅರೆಸ್ಟ್
ಮುಂಬೈ , ಸೋಮವಾರ, 10 ಜನವರಿ 2022 (09:37 IST)
ಮುಂಬೈ: ಸಾಮಾಜಿಕ ಜಾಲತಾಣದ ಮೂಲಕ ಎಷ್ಟೋ ಮುಗ್ಧ ಹೆಣ್ಣು ಮಕ್ಕಳಿಗೆ ಅನ್ಯಾಯವಾಗುವುದು ಹೊಸದೇನಲ್ಲ. ಇದೀಗ ಆ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.

ಅಪ್ರಾಪ್ತೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿಕೊಂಡಿದ್ದ 19 ವರ್ಷದ ಯುವಕ ಬಳಿಕ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.

ಈ ಕುರಿತು ಕಿರುಕುಳ ಸಹಿಸಲಾರದೇ ಬಾಲಕಿ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ತಾಯಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಮುಂಬೈ ಮೂಲದ ಆರೋಪಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊವಿಡ್ ಗೆ ಹೆದರಿ ವಿಷ ಸೇವಿಸಿ ಅಮ್ಮ-ಮಗ ಆತ್ಮಹತ್ಯೆ