Select Your Language

Notifications

webdunia
webdunia
webdunia
webdunia

ಸಾಕು ನಾಯಿಗೆ 7 ಲಕ್ಷ ವೆಚ್ಚ ಬರ್ತ್ ಡೇ ಪಾರ್ಟಿ: ಮಾಲಿಕರು ಈಗ ಜೈಲಿಗೆ!

webdunia
ಅಹಮ್ಮದಾಬಾದ್ , ಸೋಮವಾರ, 10 ಜನವರಿ 2022 (08:57 IST)
ಅಹಮ್ಮದಾಬಾದ್: ಸಾಕು ನಾಯಿಗೆ 7 ಲಕ್ಷ ರೂ.ಗಳ ಅದ್ಧೂರಿ ವೆಚ್ಚದ ಬರ್ತ್ ಡೇ ಪಾರ್ಟಿ ಆಯೋಜಿಸಿದ ಮಾಲಿಕರು ಈಗ ಜೈಲು ಪಾಲಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಅಹಮ್ಮದಾಬಾದ್ ನಲ್ಲಿ ಕುಟುಂಬವೊಂದು ತಮ್ಮ ಪ್ರೀತಿಯ ಎರಡು ಸಾಕು ನಾಯಿಗಳ ಬರ್ತ್ ಡೇ ಪಾರ್ಟಿಯನ್ನು 7 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಆಯೋಜಿಸಿತ್ತು. ಅತಿಥಿಗಳನ್ನು ಕರೆದು, ಹಾಡು ಹಾಡಿಸಿ ಭರ್ಜರಿ ಪಾರ್ಟಿಯೇನೋ ಮುಗಿಯಿತು.

ಆದರೆ ಈ ಪಾರ್ಟಿ ಮುಗಿದ ಮೇಲೆ ಮಾಲಿಕರು ಜೈಲಿನ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ಕಾರಣ, ಪಾರ್ಟಿಯಲ್ಲಿ ಕೊರೋನಾ ನಿಯಮ ಮುರಿದಿದ್ದಕ್ಕೆ ಶಿಕ್ಷೆಯಾಗಿದೆ.  ರಾತ್ರಿ 11 ಗಂಟೆಗೆ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಪಾರ್ಟಿ ಆಯೋಜಿಸಿದ್ದಕ್ಕೆ ಮಾಲಿಕರಿಗೆ ಶಿಕ್ಷೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನೇ ಕೊಂದು ಮನೆಯಲ್ಲೇ ಹೂತಿದ್ದ ಪತಿ!