Select Your Language

Notifications

webdunia
webdunia
webdunia
webdunia

ಪತ್ನಿಯನ್ನೇ ಕೊಂದು ಮನೆಯಲ್ಲೇ ಹೂತಿದ್ದ ಪತಿ!

ಪತ್ನಿಯನ್ನೇ ಕೊಂದು ಮನೆಯಲ್ಲೇ ಹೂತಿದ್ದ ಪತಿ!
, ಸೋಮವಾರ, 10 ಜನವರಿ 2022 (08:26 IST)
ಚಿತ್ರದುರ್ಗ : ಜೀವನದಲ್ಲಿ ಚೆನ್ನಾಗಿ ಬದುಕಲು ಹಣ ಸಂಗ್ರಹಿಸಿಡಬೇಕೆಂದು ಬುದ್ಧಿವಾದ ಹೇಳಿದ ಚಿತ್ರದುರ್ಗ ತಾಲೂಕಿನ ಕೋಣನೂರಿನಲ್ಲಿ ಪತ್ನಿಯನ್ನು ಕೊಲೆಗೈದು, ಮನೆಯಲ್ಲೇ ಹೆಣವನ್ನು ಹೂತಿಟ್ಟಿದ್ದ ಆರೋಪಿ ನಾರಪ್ಪ ಅರೆಸ್ಟ್ ಆಗಿದ್ದಾನೆ.
 
ಮದ್ಯವ್ಯಸನ ಜೊತೆಗೆ ಜೂಜಾಡೋ ಚಟ ಮೈಗೂಡಿಸಿಕೊಂಡಿದ್ದ ನಾರಪ್ಪ ದುಡಿದ ದುಡ್ಡನ್ನೆಲ್ಲ ಮದ್ಯ, ಇಸ್ಪೀಟು ಅಂತ ಹಾಳು ಮಾಡ್ತಿದ್ದನು. ಈ ದುರಾಭ್ಯಾಸಗಳಿಂದ ಬೇಸತ್ತ ಪತ್ನಿ ಸುಮಾ ಪದೇ ಪದೇ ಬುದ್ಧಿಮಾತು ಹೇಳ್ತಾ ಇದ್ಳು.

ಆದರೆ ಪತ್ನಿ ಬುದ್ಧಿಮಾತು ಹೇಳಿದಳು ಅಂತ ಮದುವೆ ವಾರ್ಷಿಕೋತ್ಸವದ ದಿನವೇ ಆಕೆಯನ್ನು ಕೊಂದು ಕಾಣೆಯಾಗಿದ್ದಾಳೆ ಎಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ನಾರಪ್ಪ ದೂರು ಕೊಟ್ಟಿದ್ದನು.  ನಾರಪ್ಪನಿಂದ ಪೊಲೀಸರು ದೂರು ದಾಖಲಿಸಿಕೊಂಡು ಸುಮಾಳನ್ನು ಹುಡುಕುತ್ತಿದ್ದರು.

ಸುಮಾ ಕಾಣೆಯಾಗಿ 12 ದಿನ ಕಳೆದರೂ ಸಿಗದೇ ಇದ್ದಾಗ ಪೊಲೀಸರು ಅನುಮಾನಗೊಂಡು ನಾರಪ್ಪನ ಮನೆ ಪರಿಶೀಲನೆ ನಡೆಸಿದ್ದರು. ಆಗ ನಾರಪ್ಪನೇ ಪತ್ನಿಯನ್ನು ಕೊಂದು ಮನೆಯೊಳಗೆ ಹೂತಿಟ್ಟಿರುವ ಶಂಕೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗ ತಾರತಮ್ಯ ಹೋಗಲಾಡಿಸುವ ಕ್ರಮ: ಸರ್‌, ಮೇಡಂ ಸಂಬೋಧನೆ ಬಿಟ್ಟ ಕೇರಳದ ಶಾಲೆ