ನವದೆಹಲಿ : ಕಾಯಿಲೆ ಪೀಡಿತರಿಗೆ ಮೊದಲ 2 ಡೋಸ್ ಪಡೆದರೂ ಅವರ ರೋಗನಿರೋಧಕ ಶಕ್ತಿ ವೃದ್ಧಿಸದೇ ಇರಬಹುದು.
ಈಗಾಗಲೇ ಎರಡು ಡೋಸ್ ಪಡೆದ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಲಿದೆ.
ಇನ್ನು ವೈದ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ನಿತ್ಯ ಸಾವಿರಾರು ಜನ ಹಾಗೂ ರೋಗಿಗಳು ಸಂಪರ್ಕಕ್ಕೆ ಬರುತ್ತಿರುತ್ತಾರೆ. ಹೀಗಾಗಿ ಅವರಿಗೆ ಮುಂಜಾಗ್ರತಾ ಡೋಸ್ ನೀಡಲಾಗುತ್ತದೆ.
ಬೂಸ್ಟರ್ ಡೋಸ್ ಬಗ್ಗೆ ಇದ್ದ ಗೊಂದಲಕ್ಕೆ ಕೊನೆಗೂ ಕೇಂದ್ರ ಸರ್ಕಾರ ತೆರೆ ಎಳೆಯುವ ಕೆಲಸ ಮಾಡಿದೆ. ಬೂಸ್ಟರ್ ಡೋಸ್ಗೆ ಯಾವುದೇ ಕಾರಣಕ್ಕೂ ಮಿಶ್ರಣ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಮೊದಲು ಕೊಟ್ಟಂತೆಯೇ ಬೂಸ್ಟರ್ ಲಸಿಕೆ ನೀಡಲಾಗುತ್ತದೆ. ಬೂಸ್ಟರ್ ಡೋಸ್ ಲಸಿಕೆ ವೇಳೆ ಮಿಕ್ಸ್ ಡೋಸ್ ನೀಡಲು ಅವಕಾಶವಿಲ್ಲ. ಈ ಹಿಂದೆ ಮೊದಲ, ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು. ಮಿಕ್ಸ್ ಬೂಸ್ಟರ್ ಡೋಸ್ ನೀಡಲು ಅನುಮತಿಯಿಲ್ಲ.